ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ವಿಜಯ ರಂಗರಾಜು ಈಗ ಕೈಕಾಲು ಹಿಡಿದು ಕನ್ನಡಿಗರ ಕ್ಷಮೆ ಯಾಚಿಸಿದ್ದಾರೆ.
ವಿಶೇಷ ವಿಡಿಯೋ ಮೂಲಕ ವಿಜಯ ರಂಗರಾಜು ಕ್ಷಮೆ ಯಾಚಿಸಿದ್ದು, ನನ್ನ ತಪ್ಪಿಗೆ ತಕ್ಕ ಶಿಕ್ಷೆಯಾಗಿದೆ. ನಾನೀಗ ಕೊರೋನಾ ಸೋಂಕಿಗೊಳಗಾಗಿದ್ದೇನೆ ಎಂದಿದ್ದಾರೆ. ನಾನು ವಿಷ್ಣುವರ್ಧನ್ ಬಗ್ಗೆ ಹಾಗೆ ಮಾತನಾಡಬಾರದಿತ್ತು. ಅವರು ತೀರಿಕೊಳ್ಳುವ ಮೊದಲು ನನಗೆ ನೀಡಿದ್ದ ಪಾತ್ರವೊಂದನ್ನು ಬೇರೆಯವರಿಗೆ ಕೊಡಿಸಿದ್ದರು. ಆ ಕೋಪದಲ್ಲಿ ನಾನು ಅವರ ಬಗ್ಗೆ ಸುಳ್ಳು ಹೇಳಿದ್ದೆ. ನನ್ನ ತಪ್ಪು ಕ್ಷಮಿಸಿ ಬಿಡಿ ಎಂದು ಮಂಡಿಯೂರಿ ವಿಷ್ಣುವರ್ಧನ್ ಕುಟುಂಬಸ್ಥರು, ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್ ಸೇರಿದಂತೆ ವಿಷ್ಣು ಅಭಿಮಾನಿಗಳ ಬಳಿ ಕಣ್ಣೀರು ಹಾಕುತ್ತಾ ಕ್ಷಮೆ ಕೇಳಿದ್ದಾರೆ.