Webdunia - Bharat's app for daily news and videos

Install App

ದಾಂಪತ್ಯದಲ್ಲಿ ಕಲಹ ಸುದ್ದಿ ಬೆನ್ನಲ್ಲೇ ವಿಡಿಯೋ ಹಂಚಿಕೊಂಡ ಸಮೀರ್-ಶ್ರಾವಣಿ ದಂಪತಿ

Sampriya
ಸೋಮವಾರ, 30 ಸೆಪ್ಟಂಬರ್ 2024 (19:58 IST)
Photo Courtesy X
ದಾಂಪತ್ಯ ಕಲಹದಿಂದ ಠಾಣೆ ಮೆಟ್ಟಿಲೇರಿದ ಸುದ್ದಿ ಬೆನ್ನಲ್ಲೇ ಬಿಗ್‌ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಶ್ರಾವಣಿ ಹಾಗೂ ಸಮೀರ್ ಆಚಾರ್ಯ  ಮಗಳ ಜತೆ ಖುಷಿ ಖುಷಿಯಲ್ಲಿ ಸಮಯ ಕಳೆಯುತ್ತಿರುವುದನ್ನು ಕಾಣಬಹುದು.

ಈ ವಿಡಿಯೋಗೆ ನೆಟ್ಟಿಗರು ಬಗೆ ಬಗೆಯಾಗಿ ಕಮೆಂಟ್ ಮಾಡಿದ್ದಾರೆ.  ನಿಮ್ಮ ಕುಟುಂಬದಲ್ಲಿ ಕಲಹ ಅಂತ ಕೆಲವು ಮೀಡಿಯಾದಲ್ಲಿ ಬರುತ್ತಿದೆ ಅದರ ಬಗ್ಗೆ ಕ್ಲಾರಿಟಿ ಕೊಟ್ಟು ಸಂತೋಷದಿಂದ ನೂರ್ಕಾಲ ಹೀಗೇ ನಗುನಗುತ್ತಾ ಇರಿ ಎಂದಿದ್ದಾರೆ.

ಮತ್ತೊಬ್ಬರು ನಿಮ್‌ ಜೀವನ ನೆಟ್ಟಗೆ ಇಟ್ಟುಕೊಳ್ಳಿ, ಲೈವ್ ಬಂದು ಉಪಾದೇಶ ಕೊಡೊದಲ್ಲ ಎಂದಿದ್ದಾರೆ.

ಏನ್ರಿ ಇದು ಒಂದು ಅರ್ಥನೇ ಆಗೋಲ್ಲ anyway god bless u both ಆಚಾರ್ ಎಂದು ಕಮೆಂಟ್ ಮಾಡಿದ್ದಾರೆ.

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ‌ಮಿಂಚಿದ್ದ ಸಮೀರ್ ಆಚಾರ್ಯ ಅವರ ದಾಂಪತ್ಯದಲ್ಲಿ ಕಲಹ ಉಂಟಾಗಿ ಪತಿ ವಿರುದ್ಧ ಪತ್ನಿ ಶ್ರಾವಣಿ ಠಾಣೆ ಮೆಟ್ಟಿಲೇರಿದ ಹಂತಕ್ಕೆ ತಲುಪಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ಅವರು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪವನ್ನು ಅವರ ಪತ್ನಿ ಶ್ರಾವಣಿ ಮಾಡಿದ್ದಾರೆ. ಈ ಸುದ್ದಿ ಮಾದ್ಯಮದಲ್ಲಿ ಬಿತ್ತರವಾಗುತ್ತಿದ್ದ ಬೆನ್ನಲ್ಲೇ ಶ್ರಾವಣಿ ಅವರು ಪೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments