Select Your Language

Notifications

webdunia
webdunia
webdunia
webdunia

ಬಿಗ್‌ಬಾಸ್ ಸ್ವರ್ಗದಲ್ಲಿ ಮೊದಲ ದಿನವೇ ಅಲ್ಲೋಲ, ಕಲ್ಲೋಲ

ಬಿಗ್‌ಬಾಸ್ ಸ್ವರ್ಗದಲ್ಲಿ ಮೊದಲ ದಿನವೇ ಅಲ್ಲೋಲ, ಕಲ್ಲೋಲ

Sampriya

ಬೆಂಗಳೂರು , ಸೋಮವಾರ, 30 ಸೆಪ್ಟಂಬರ್ 2024 (18:07 IST)
Photo Courtesy X
ಬೆಂಗಳೂರು: ಬಿಗ್‌ಬಾಸ್ ಶುರುವಾದ ಮೊದಲ ದಿನವೇ ಸ್ವರ್ಗ ಹಾಗೂ ನರಕ ಸ್ಪರ್ಧಿಗಳ ಮಧ್ಯೆ ಜಗಳ ಶುರುವಾದ ಹಾಗಿದೆ. ದೊಡ್ಮನೆಯಲ್ಲಿ ನರಕ ನಿವಾಸಿಗಳು ಹಾಗೂ ಸ್ವರ್ಗ ನಿವಾಸಿಗಳಾಗಿ ಎಂದು ಎರಡು ತಂಡಗಳನ್ನಾಗಿ ಮಾಡಲಾಗಿದೆ.

ಬಿಗ್‌ಬಾಸ್ ನರಕ ನಿವಾಸಿಗಳಿಗೆ ಮನೆ ಕೆಲಸ, ಸ್ವರ್ಗ ನಿವಾಸಿಗಳು ಹೇಳುವ ಕೆಲಸವನ್ನು ಮಾಡುವಂತೆ ಸೂಚಿಸಿದೆ. ಇದೀಗ ಕೆಲಸದ ವಿಚಾರವಾಗಿ ನರಕ ನಿವಾಸಿ ಚೈತ್ರಾ ಕುಂದಾಪುರ ಜಗಳ ಶುರು ಮಾಡಿದ್ದಾರೆ. ಹಣ್ಣನ್ನು ವಾಶ್ ಮಾಡಿ ಕೊಡಿ ಎಂದು ಸ್ವರ್ಗ ನಿವಾಸಿ ಹೇಳಿದ ಹಣ್ಣು ತಿಂದು ಚೈತ್ರಾ ರೋಲ್ಸ್ ಬ್ರೇಕ್ ಮಾಡಿದ್ದಾರೆ. ಇದರಿಂದ ಚೈತ್ರಾ ಹಾಗೂ ಸ್ವರ್ಗನಿವಾಸಿಗಳ ಮಧ್ಯೆ ಜಗಳ ಶುರುವಾಗಿದೆ.

ಮೊದಲ ದಿನವೇ ಸ್ವರ್ಗದಲ್ಲಿ ಚೈತ್ರ ಅಲ್ಲೋಲ, ಕಲ್ಲೋಲ ಸೃಷ್ಟಿಸಿದ್ರಾ ಚೈತ್ರಾ ಎಂದು ಇಂದಿನ ಎಪಿಸೋಡ್ ನೋಡಬೇಕಿದೆ.  ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಜಗಳವನ್ನು ನೋಡಬಹುದು.

ಪ್ರೋಮೋ ನೋಡಿದ ಬಿಗ್‌ಬಾಸ್ ಪ್ರಿಯರು, 'ನೋಡುವಷ್ಟು ನೋಡಿದ್ದೇವೆ ಸಹಿಸುವಷ್ಟು ಸಹಿಸಿದ್ದೇವೆ ಇನ್ನು ಮುಂದೆ ಸಮ್ನೆ ಇರಲ್ಲ' ಎಂದು ಚೈತ್ರ ಕಾಲೆಳೆದಿದ್ದಾರೆ.
ಮತ್ತೊಬ್ಬರು ಹೊಸ ಅಧ್ಯಾಯ ಈಗ ಶುರು.

Share this Story:

Follow Webdunia kannada

ಮುಂದಿನ ಸುದ್ದಿ

ರವಿವರ್ಮನ ಬೊಂಬೆಯಾದ ಹರ್ಷಿಕಾ ಪೂಣಚ್ಚ, ಹಂಸ ದಮಯಂತಿಯಂತೆ ಪೋಸ್‌