Select Your Language

Notifications

webdunia
webdunia
webdunia
webdunia

ಪುಷ್ಪ ಬಳಿಕ ಮತ್ತೆ ಐಟಂ ಹಾಡಿಗೆ ಕುಣಿಯಲಿದ್ದಾರಂತೆ ಸಮಂತಾ

ಪುಷ್ಪ ಬಳಿಕ ಮತ್ತೆ ಐಟಂ ಹಾಡಿಗೆ ಕುಣಿಯಲಿದ್ದಾರಂತೆ ಸಮಂತಾ
ಹೈದರಾಬಾದ್ , ಮಂಗಳವಾರ, 25 ಜನವರಿ 2022 (09:50 IST)
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿದ್ದ ಪುಷ್ಪ ಭಾಗ 1 ರಲ್ಲಿ ಸಮಂತಾ ಋತು ಪ್ರಭು ಐಟಂ ಹಾಡೊಂದರಲ್ಲಿ ಕುಣಿದು ಭರ್ಜರಿ ಸದ್ದು ಮಾಡಿದ್ದರು.

ಇದೀಗ ಅವರು ಮತ್ತೊಂದು ಬಹುನಿರೀಕ್ಷಿತ ಸಿನಿಮಾದಲ್ಲಿ ಐಟಂ ಹಾಡಿಗೆ ಕುಣಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದುವೇ ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಲೈಗರ್’.

ಈ ಸಿನಿಮಾ ಈಗಾಗಲೇ ಸಾಕಷ್ಟು ಕಾರಣಗಳಿಗೆ ಸುದ್ದಿಯಲ್ಲಿದೆ. ಇನ್ನು, ಪುಷ್ಪದಲ್ಲಿ ಸಮಂತಾ ಐಟಂ ಹಾಡು ಮಾಡಿದ್ದ ಮೋಡಿ ನೋಡಿದ ಮೇಲೆ ಲೈಗರ್ ತಂಡ ಸಮಂತಾರನ್ನು ತಮ್ಮ ಸಿನಿಮಾದಲ್ಲೂ ಹಾಡೊಂದಕ್ಕೆ ಕರೆಸಿಕೊಳ್ಳಲು ಪ್ರಯತ್ನ ನಡೆಸಿದೆಯಂತೆ. ಈಗಾಗಲೇ ಸಮಂತಾರನ್ನು ಚಿತ್ರತಂಡ ಸಂಪರ್ಕಿಸಿದೆ. ಸದ್ಯಕ್ಕೆ ಸ್ವಿಜರ್ ಲ್ಯಾಂಡ್ ನಲ್ಲಿ ರಜಾ ಮೂಡ್ ನಲ್ಲಿರುವ ಸಮಂತಾ ಇದಕ್ಕೆ ಒಪ್ಪಿಗೆ ಸೂಚಿಸುತ್ತಾರಾ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಇಲ್ಲದೇ ಒನ್ ಕಟ್ ಟು ಕಟ್ ರಿಲೀಸ್ ಡೇಟ್ ಅನೌನ್ಸ್