Publish Date: Sat, 22 Jan 2022 (09:00 IST)
Updated Date: Sat, 22 Jan 2022 (09:14 IST)
ಮುಂಬೈ: ಅಲ್ಲು ಅರ್ಜುನ್ ನಾಯಕರಾಗಿರುವ ಅಲವೈಕುಂಠಪುರಮುಲೊ ಸಿನಿಮಾ ಹಿಂದಿ ಭಾಷೆಗೆ ಡಬ್ ಆಗಿ ಥಿಯೇಟರ್ ನಲ್ಲಿ ಜನವರಿ 26 ರಿಂದ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ಅದೀಗ ದಿಡೀರ್ ಆಗಿ ರದ್ದಾಗಿದೆ.
ಪುಷ್ಪ ಸಿನಿಮಾ ಯಶಸ್ಸಿನ ಬಳಿಕ ಅಲ್ಲು ಅರ್ಜುನ್ ಗೆ ಬಾಲಿವುಡ್ ನಲ್ಲೂ ಬೇಡಿಕೆ ಬಂದಿದೆ. ಇದನ್ನೇ ಲಾಭ ಮಾಡಿಕೊಳ್ಳಲು ಅಲವೈಕುಂಠಪುರಮುಲೊ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು.
ಆದರೆ ಈಗ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರಿಲೀಸ್ ನ್ನು ದಿಡೀರ್ ಆಗಿ ರದ್ದು ಮಾಡಲಾಗಿದೆ. ಅಲ್ಲದೆ ಈ ಸಿನಿಮಾ ಈಗಾಗಲೇ ಕಾರ್ತಿಕ್ ಆರ್ಯನ್ ನಾಯಕರಾಗಿ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಈ ಸಿನಿಮಾ ಈ ವರ್ಷವೇ ಬಿಡುಗಡೆಯಾಗುತ್ತಿದೆ. ಹೀಗಾಗಿ ಡಬ್ಬಿಂಗ್ ಅವತರಣಿಕೆ ರಿಲೀಸ್ ರದ್ದುಗೊಳಿಸಲಾಗಿದೆ.