Publish Date: Tue, 16 Nov 2021 (10:36 IST)
Updated Date: Tue, 16 Nov 2021 (10:37 IST)
ಹೈದರಾಬಾದ್: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪುಷ್ಪ ಸಿನಿಮಾದಲ್ಲಿ ನಟಿ ಸಮಂತಾ ಋತು ಪ್ರಭು ಸರ್ಪೈಸ್ ಎಂಟ್ರಿ ಕೊಟ್ಟಿದ್ದಾರೆ.
ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಲು ಸಮಂತಾ ಎಂಟ್ರಿಯಾಗಲಿದ್ದಾರೆ. ನಾಗಚೈತನ್ಯ ಜೊತೆಗಿನ ವಿಚ್ಛೇದನದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕಲು ಒಪ್ಪಿಕೊಂಡಿದ್ದಾರೆ.
ಇದು ಸಮಂತಾ ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿ ನೀಡಿದೆ. ನವಂಬರ್ ಕೊನೆಯ ವಾರದಲ್ಲಿ ಸಮಂತಾ ಚಿತ್ರೀಕರಣದಲ್ಲ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸಮಂತಾಗಾಗಿ ವಿಶೇಷ ಹಾಡು ಸಿದ್ಧವಾಗುತ್ತಿದೆಯಂತೆ.