ಸಮಂತಾ ರುತ್ ಪ್ರಭುಗೆ ಪಿತೃ ವಿಯೋಗ: ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್‌ ಮಾಡಿದ ಬಹುಭಾಷಾ ನಟಿ

Sampriya
ಶನಿವಾರ, 30 ನವೆಂಬರ್ 2024 (14:13 IST)
Photo Courtesy X
ಮುಂಬೈ: ಸೌತ್ ನಟಿ ಸಮಂತಾ ರುತ್ ಪ್ರಭು ಅವರಿಗೆ ಪಿತೃ ವಿಯೋಗವಾಗಿದೆ. ಸಮಂತಾ ತಂದೆ ಜೋಸೆಫ್ ಪ್ರಭು ಅವರು ಶುಕ್ರವಾರ ವಿಧಿವಶರಾಗಿದ್ದಾರೆ. ಈ ವಿಚಾರವನ್ನು ಸ್ವತಃ ನಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.  

ನಾವು ಮತ್ತೆ ಭೇಟಿಯಾಗುವವರೆಗೆ ಅಪ್ಪ ಎಂದು ಸಮಂತಾ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಒಡೆದ ಹೃದಯದ ಎಮೋಜಿ ಬಳಸಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ನಟಿಯ ತಂದೆ ಬಳುತ್ತಿದ್ದರು. ಇದೀಗ ನಟಿಯ ತಂದೆಯ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಅಂದಹಾಗೆ, ಸಿನಿಮಾಗಳಲ್ಲಿ ನಟಿ ಅದಷ್ಟೇ ಬ್ಯುಸಿಯಿದ್ದರೂ ಕೂಡ ಕುಟುಂಬದ ಬೆಂಬಲವನ್ನು ನೆನೆಯುತ್ತಿದ್ದರು. ಇಂದು ಸಮಂತಾ ಸ್ಟಾರ್ ನಟಿಯಾಗಿ ಗೆದ್ದಿರೋದ್ದಕ್ಕೆ ಅವರ ಕುಟುಂಬದ ಬೆಂಬಲ ಸಾಕಷ್ಟೀದೆ.

ನಾಗಚೈತನ್ಯ ಜೊತೆ ಸಮಂತಾ ಡಿವೋರ್ಸ್ ಪಡೆದುಕೊಂಡಿದ್ದ ಸಂದರ್ಭದಲ್ಲಿ ತಂದೆ ಜೋಸೆಫ್ ಬೇಸರ ಮಾಡಿಕೊಂಡಿದ್ದರು. ಈ ನೋವಿನಿಂದ ಹೊರಬರಲು ಸಾಕಷ್ಟು ಸಮಯ ಹಿಡಿದಿತ್ತು.

ವಿಚ್ಚೇದನದ ನಂತರ ಸಮಂತಾ ಅವರು ಅತೀ ವಿರಳವೆನಿಸುವ ಕಾಯಿಲೆ ಮೈಯೋಸಿಟಿಸ್ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು, ಅದರ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟ್‌ ಮಾಡುತ್ತಿರುತ್ತಿದ್ದರು. ಈಗ ಇದರ ಜೊತೆ ತಂದೆ ಜೋಸೆಫ್ ರುತ್ ಪ್ರಭು ಅವರ ಸಾವು ಸಮಂತಾರನ್ನು ಮತ್ತಷ್ಟು ದುಃಖಕ್ಕೀಡು ಮಾಡುವಂತೆ ಮಾಡಿದೆ.

ತೆಲುಗು ಆಂಗ್ಲೋ ಇಂಡಿಯನ್ ಆಗಿರುವ ಸಮಂತಾ ತಮದೆ ಜೋಸೆಫ್ ರುತ್ ಪ್ರಭು ಅವರು ಸಮಂತಾ ಅವರ ಜೀವನ ಹಾಗೂ ವೃತ್ತಿ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರಿದ್ದರು. ವೃತ್ತಿಪರ ಬದ್ಧತೆಗಳ ಹೊರತಾಗಿಯೂ ಸಮಂತಾ ತನ್ನ ಕುಟುಂಬ ಹಾಗೂ ತಂದೆಯ ಬಗ್ಗೆ ಈ ಹಿಂದೆಯೇ ಸಾಕಷ್ಟು ಬಾರಿ ಮಾತನಾಡಿದ್ದಾರೆ. ತನ್ನ ಸಂಕಷ್ಟ ಕಾಲ ಹಾಗೂ ತನ್ನ ಬೆಳವಣಿಗೆಯ ಬಗ್ಗೆ ಕುಟುಂಬ ಹಾಗೂ ತಂದೆ ನೀಡಿದ ಬೆಂಬಲದ ಬಗ್ಗೆ ಸಮಂತಾ ಆಗಾಗ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments