ವಿಚ್ಛೇದನದ ಬಳಿಕ ಬಂದ ವದಂತಿಗಳಿಗೆ ಸ್ಪಷ್ಟನೆ ಕೊಟ್ಟ ಸಮಂತಾ

Webdunia
ಶುಕ್ರವಾರ, 8 ಅಕ್ಟೋಬರ್ 2021 (16:40 IST)
ಹೈದರಾಬಾದ್: ನಾಗಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಬೆನ್ನಲ್ಲೇ ಸಮಂತಾ ಋತು ಪ್ರಭು ಬಗ್ಗೆ ಹಲವು ಊಹಾಪೋಹಗಳು ಹರಡಿದ್ದವು. ಅದೆಲ್ಲದಕ್ಕೂ ಸಮಂತಾ ಈಗ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ.


ಸಮಂತಾ-ನಾಗಚೈತನ್ಯ ವಿಚ್ಛೇದನದ ಬಗ್ಗೆ ಹಲವು ಕಾರಣಗಳ ಬಗ್ಗೆ ಅಂತರ್ಜಾಲದಲ್ಲಿ, ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಕೆಲವರು ಸಮಂತಾ ಗರ್ಭಪಾತ ಮಾಡಿಸಿಕೊಂಡರು, ಅವರಿಗೆ ಮಕ್ಕಳಾಗುವುದು ಬೇಕಿರಲಿಲ್ಲ, ಅವರೀಗ ಬೇರೊಬ್ಬರ ಪ್ರೀತಿಗೆ ಬಿದ್ದಿದ್ದಾರೆ ಎಂದೆಲ್ಲಾ ಸುಳ್ಳು ಸುದ್ದಿ ಹರಡಿಸಿದ್ದರು.

ಇದೆಲ್ಲದರ ಬಗ್ಗೆ ಪ್ರತಿಕ್ರಿಯಿಸಿರುವ ಸಮಂತಾ ಇಂತಹ ಸುಳ್ಳು ಸುದ್ದಿಗಳಿಂದ ನನ್ನನ್ನು ವಿಚಲಿತಳಾಗಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ವಿಚ್ಛೇದನ ಎನ್ನುವುದು ತೀರಾ ವಿಷಾಧದ ಸಂಗತಿ. ಇದರಿಂದ ನನಗೆ ಹೊರಬರಲು ಸಮಯ ಕೊಡಿ. ಈ ರೀತಿ ವೈಯಕ್ತಿಕ ತೇಜೋವಧೆ ಕಠಿಣವಾಗಿರಬಹುದು. ಆದರೆ ಅದರಿಂದ ನನ್ನನ್ನು ವಿಚಲಿತಳಾಗಿಸಲು ಸಾಧ‍್ಯವಿಲ್ಲ ಎಂದು ಸಮಂತಾ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ನಂದಗೋಕುಲದ ಅಭಿದಾಸ್ ಈಗ ಲ್ಯಾಂಡ್ ಲಾರ್ಡ್ ನಲ್ಲಿ ಖಡಕ್ ಚಿಕ್ಕದಣಿ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments