Publish Date: Sat, 07 Oct 2017 (15:53 IST)
Updated Date: Sat, 07 Oct 2017 (16:06 IST)
ಗೋವಾ: ಟಾಲಿವುಡ್ ಸ್ಟಾರ್ ಜೋಡಿ ಸಮಂತಾ ಮತ್ತು ಅಕ್ಕಿನೇನಿ ನಾಗಚೈತನ್ಯ ಜೋಡಿ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಗೋವಾ ಕಡಲ ತೀರದಲ್ಲಿ ನಿನ್ನೆ ಇವರಿಬ್ಬರ ಮದುವೆ ನೆರವೇರಿದ ಮದುವೆಗೆ ತೆಲುಗು ಚಿತ್ರರಂಗದ ಗಣ್ಯರು ಸಾಕ್ಷಿಯಾದರು.
ಹಿಂದೂ ಸಂಪ್ರದಾಯದಂತೆ ಸಮಂತಾ, ನಾಗಚೈತನ್ಯ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರು ಸಹ ಸಾಂಪ್ರದಾಯಿಕ ರೇಷ್ಮೆ ವಸ್ತ್ರ ಧರಿಸಿದ್ದರು. ರೀಲ್ ಲೈಫಿನಲ್ಲಿ ಮದುವೆಯಾಗಿದ್ದ ಈ ಜೋಡಿ, ಈಗ ರಿಯಲ್ ಲೈಫಿನಲ್ಲೂ ಒಂದಾಗಿದ್ದಾರೆ.
ಇವರಿಬ್ಬರ ಮದುವೆಗೆಂದೇ ಗೋವಾದ ಕಡಲತೀರದಲ್ಲಿ ವಿಶೇಷ ಸೆಟ್ ಹಾಕಲಾಗಿತ್ತು. ಚಂದದ ಸಿಂಗಾರ ಮಾಡಿದ್ದ ಸೆಟ್ ನಲ್ಲಿ ನಾಗಚೈತನ್ಯ, ಸಮಂತಾಗೆ ಮಾಂಗಲ್ಯಧಾರಣೆ ಮಾಡಿದರು.
ಇಂದು ಕ್ರೈಸ್ತ ಧರ್ಮದ ಪ್ರಕಾರ ನಾಗಚೈತನ್ಯ, ಸಮಂತಾ ಮದುವೆ ನಡೆಯಲಿದೆ. ಇಲ್ಲಿ ಕೂಡ ಎರಡೂ ಕುಟುಂಬದವರು ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ. ಇನ್ನು ಅ. 15ರಂದು ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಆರತಕ್ಷತೆ ನಡೆಯಲಿದೆ. ಅಭಿಮಾನಿಗಳು ಹಾಗೂ ಗಣ್ಯರಿಗೆ ಆಹ್ವಾನ ನೀಡಬಹುದು ಎನ್ನಲಾಗಿದೆ.
ಈ ಜೋಡಿ ಒಟ್ಟಿಗೆ ನಟಿಸಿದ ಸಿನಿಮಾ `ಏ ಮಾಯೇ ಚೇಸಾವೆ’ ಶುರುವಾಗಿದ್ದು, ನ್ಯೂಯಾರ್ಕ್ ನಲ್ಲಿ. ಹೀಗಾಗಿ ಈ ಕ್ಯೂಟ್ ಕಪಲ್ ಹನಿಮೂನ್ ಗಾಗಿ ಅಲ್ಲಿಗೆ ಹೋಗೊ ಪ್ಲಾನ್ ಮಾಡಿದ್ದಾರಂತೆ.