Publish Date: Wed, 22 Feb 2017 (13:22 IST)
Updated Date: Wed, 22 Feb 2017 (13:27 IST)
ಹೈದರಾಬಾದ್: ಮದುವೆ ಸಂಭ್ರಮದಲ್ಲಿದ್ದ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಮನೆಯಲ್ಲೀಗ ಮೌನ ಮನೆ ಮಾಡಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಖಿಲ್ ಅಕ್ಕಿನೇನಿ ಮದುವೆ ಮುರಿದು ಬಿದ್ದಿದೆ.
ಅಖಿಲ್ ಮತ್ತು ಶ್ರೀಯಾ ಭೂಪಾಲ್ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ವರ್ಷ ಮೇ ತಿಂಗಳಿನಲ್ಲಿ ಇಟೆಲಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವ ಯೋಜನೆ ಹೊಂದಿದ್ದರು. ಆದರೆ ಇವರಿಬ್ಬರ 2 ವರ್ಷದ ಒಡನಾಟ ಅಂತ್ಯವಾಗಿದೆ.
ಉಭಯ ಕುಟುಂಬಗಳೂ ಒಟ್ಟಾಗಿ ಕೂತು ಈ ತೀರ್ಮಾನಕ್ಕೆ ಬಂದಿವೆ. ಆದರೆ ನಿಜವಾದ ಕಾರಣವೇನೆಂದು ತಿಳಿದುಬಂದಿಲ್ಲ. ಶ್ರೀಯಾ ಪ್ರತಿಷ್ಠಿತ ಜಿವಿಕೆ ಗ್ರೂಪ್ ಸಂಸ್ಥೆಯ ಮಾಲಿಕರ ಪುತ್ರಿ ಹಾಗೂ ಫ್ಯಾಶನ್ ಡಿಸೈನರ್ ಆಗಿದ್ದರು. ಶ್ರೀಯಾ ಮತ್ತು ಅಖಿಲ್ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಮದುವೆ ಮುರಿದು ಬಿದ್ದಿರುವ ಸಂಗತಿ ಹೊರ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ