Publish Date: Sun, 02 Aug 2020 (12:23 IST)
Updated Date: Sun, 02 Aug 2020 (12:26 IST)
ಹೈದರಾಬಾದ್ : ದಕ್ಷಿಣ ಭಾರದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್. ಅದೇನೆಂದರೆ ನಟಿ ಸಮಂತಾ ನಟನೆಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಮದುವೆಯ ಬಳಿಕ ಬಹು ಬೇಡಿಕೆ ಹೊಂದಿರುವ ಈ ನಟಿ ಸಮಂತಾ ಕೈಯಲ್ಲಿ 2 ಚಿತ್ರಗಳಿದ್ದು, ಅದು ಮುಗಿಯುತ್ತಿದ್ದಂತೆ ನಟನೆಯಿಂದ ದೂರ ಉಳಿಯಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ಸಮಂತಾ ನಟನೆಯಿಂದ ದೂರ ಉಳಿಯುತ್ತಾರೆ ವಿನಃ ಸಿನಿಮಾರಂಗದಿಂದ ಅಲ್ಲ ಎನ್ನಲಾಗಿದೆ.
ಹೌದು. ಅವರು ನಟನೆ ಬಿಟ್ಟು ನಿರ್ಮಾಣದ ಕಡೆ ಗಮನ ಹರಿಸಲು ನಿರ್ಧರಿಸಿದ್ದಾರಂತೆ. ಈಗಾಗಲೇ ಸಮಂತಾ ಅಕ್ಕಿನೇನಿ ಕುಟುಂಬ ಅನ್ನಪೂರ್ಣ ಬ್ಯಾನರ್ ಹೊಂದಿದ್ದು, ಮುಂದೆ ಇದನ್ನು ಸಮಂತಾ ನೋಡಿಕೊಳ್ಳುತ್ತಾರಾ ಅಥವಾ ಹೊಸ ಬ್ಯಾನರ್ ಲಾಂಚ್ ಮಾಡುತ್ತಾರೋ ಎಂಬುದನ್ನು ಕಾದುನೋಡಬೇಕಿದೆ. ಆದರೆ ಈ ಬಗ್ಗೆ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.