Publish Date: Tue, 26 Jul 2022 (09:50 IST)
Updated Date: Tue, 26 Jul 2022 (09:58 IST)
ಮುಂಬೈ: ವಿಕ್ರಾಂತ್ ರೋಣ ಪ್ರಿ ರಿಲೀಸ್ ಈವೆಂಟ್ ನಿನ್ನೆ ಮುಂಬೈನಲ್ಲಿ ನಡೆದಿದ್ದು, ನಟ ಸಲ್ಮಾನ್ ಖಾನ್ ಜೊತೆ ಕಿಚ್ಚ ಸುದೀಪ್ ವೇದಿಕೆ ಹಂಚಿಕೊಂಡಿದ್ದಾರೆ.
ಈ ವೇಳೆ ಸುದೀಪ್ ಮತ್ತು ತಮ್ಮ ಸ್ನೇಹದ ಬಗ್ಗೆ ಸಲ್ಮಾನ್ ಮನಬಿಚ್ಚಿ ಮಾತನಾಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಹಿಂದಿಯಲ್ಲೂ ರಿಲೀಸ್ ಆಗುತ್ತಿದ್ದು, ಸಲ್ಮಾನ್ ಖಾನ್ ಹಿಂದಿಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಮಾತನಾಡಿರುವ ಸುದೀಪ್ ನನ್ನ ಕುಟುಂಬದವರು, ಸ್ನೇಹಿತರು ಎನ್ನುವ ಕಾರಣಕ್ಕೆ ಯಾವ ಸಿನಿಮಾಗೂ ನಾನು ಬೆಂಬಲಿಸಲ್ಲ. ಸುದೀಪ್ ಅವರ ಕೆಲಸಗಳನ್ನು ನಾನು ನೋಡಿದ್ದೇನೆ. ಅವರು ಅದ್ಭುತ ನಟ. ಅವರು ಅತ್ಯುತ್ತಮ ಸಿನಿಮಾ ಮಾಡಿದ್ದಕ್ಕೆ ನಾನು ಬೆಂಬಲಿಸುತ್ತಿದ್ದೇನೆ. ನಾನು ಅವರಿಗೆ ಸಪೋರ್ಟ್ ಮಾಡಿದ್ದೇನೆ ಎಂದು ಅವರು ಅಂದುಕೊಂಡಿದ್ದಾರೆ. ಆದರೆ ಅದು ನಿಜವಲ್ಲ. ಅವರೇ ನನಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಸಲ್ಮಾನ್ ಹೊಗಳಿದ್ದಾರೆ.