ಸಲಾರ್ v/s ಡಂಕಿ: ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ ಗೆದ್ದವರು ಯಾರು?

Webdunia
ಶನಿವಾರ, 23 ಡಿಸೆಂಬರ್ 2023 (09:00 IST)
ಮುಂಬೈ: ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಮತ್ತು ಶಾರುಖ್ ಖಾನ್ ನಾಯಕರಾಗಿರುವ ಬಾಲಿವುಡ್ ನ ಡಂಕಿ ಸಿನಿಮಾ ನಡುವೆ ಬಾಕ್ಸ್ ಆಫೀಸ್ ಕಾಳಗ ನಡೆದಿತ್ತು. ಇವರಲ್ಲಿ ಗೆದ್ದವರು ಯಾರು?

ಶಾರುಖ್ ನಾಯಕರಾಗಿರುವ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಸಿನಿಮಾ ನಿರೀಕ್ಷಿಸಿದಷ್ಟು ಮೊದಲ ದಿನ ಯಶಸ್ಸು ಪಡೆಯಲಿಲ್ಲ. ಸಾಕಷ್ಟು ಭಾವನಾತ್ಮಕ ಅಂಶವಿರುವ ಸಿನಿಮಾ ಮೊದಲ ದಿನ ಗಳಿಸಿದ್ದು 30 ಕೋಟಿ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಇತ್ತ ಸಲಾರ್ ಸಿನಿಮಾ ಮೊದಲ ದಿನ ಶೋ ವೀಕ್ಷಿಸಿದ ವೀಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಸಿನಿಮಾವನ್ನು ಉಗ್ರಂ ರಿಮೇಕ್ ಎಂದಿದ್ದಾರೆ. ಹಾಗಿದ್ದರೂ ಈ ಸಿನಿಮಾಗಿದ್ದ ಹೈಪ್ ನಿಂದಾಗಿ ಮೊದಲ ದಿನವೇ ಕೋಟಿ ಕೋಟಿ ಬಾಚುವಲ್ಲಿ ಯಶಸ್ವಿಯಾಗಿದೆ.

ಮೂಲಗಳ ಪ್ರಕಾರ ಸಲಾರ್ ಮೊದಲ ದಿನದ ಗಳಿಕೆ 48 ಕೋಟಿ ರೂ. ಆ ಮೂಲಕ ಮೊದಲ ದಿನದ ಗಳಿಕೆಯಲ್ಲಿ ಸಲಾರ್ ಸಿನಿಮಾ ಡಂಕಿಯನ್ನು ಹಿಂದಿಕ್ಕಿದೆ ಎಂದೇ ಹೇಳಬಹುದು. ಇದೀಗ ಕ್ರಿಸ್ ಮಸ್ ನಿಮಿತ್ತ ಸುದೀರ್ಘ ವೀಕೆಂಡ್‍ ರಜಾ ಇದ್ದು, ಎರಡೂ ಸಿನಿಮಾಗಳ ಗಳಿಕೆಯಲ್ಲಿ ಏರಿಕೆ ನಿರೀಕ್ಷಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB Season12: ಇನ್ನೂ ಆಟ ಶುರು ಮಾಡುತ್ತೇನೆಂದ ಮಲ್ಲಮ್ಮ, ದೊಡ್ಮನೆಯಿಂದ ಆಚೆ ಬಂದ್ರಾ

ಹಾಸಿಗೆ, ದಿಂಬು ಕೇಳಿದ್ದ ದರ್ಶನ್ ಗೆ ಕೋರ್ಟ್ ಕೊಟ್ಟಿದೆ ಮಹತ್ವದ ಆದೇಶ

ಕಾಂತಾರ ಚಾಪ್ಟರ್ 1 ಒಟಿಟಿಗೆ: ಬಂದದ್ದು ಸ್ವಲ್ಪ ಬೇಗ ಆಯ್ತಾ ಅಂತ ಅಂತಿದ್ದಾರೆ ಫ್ಯಾನ್ಸ್

ಪುನೀತ್ ರಾಜ್ ಕುಮಾರ್ ನಾಲ್ಕನೇ ಪುಣ್ಯ ತಿಥಿ: ಅಪ್ಪು ನೆನಪಿನಲ್ಲಿ ಅಶ್ವಿನಿ ಪುನೀತ್ ಹೇಳಿದ್ದೇನು

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ಮುಂದಿನ ಸುದ್ದಿ
Show comments