ಮುಂಬೈ: ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಮತ್ತು ಶಾರುಖ್ ಖಾನ್ ನಾಯಕರಾಗಿರುವ ಬಾಲಿವುಡ್ ನ ಡಂಕಿ ಸಿನಿಮಾ ನಡುವೆ ಬಾಕ್ಸ್ ಆಫೀಸ್ ಕಾಳಗ ನಡೆದಿತ್ತು. ಇವರಲ್ಲಿ ಗೆದ್ದವರು ಯಾರು?
ಶಾರುಖ್ ನಾಯಕರಾಗಿರುವ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಸಿನಿಮಾ ನಿರೀಕ್ಷಿಸಿದಷ್ಟು ಮೊದಲ ದಿನ ಯಶಸ್ಸು ಪಡೆಯಲಿಲ್ಲ. ಸಾಕಷ್ಟು ಭಾವನಾತ್ಮಕ ಅಂಶವಿರುವ ಸಿನಿಮಾ ಮೊದಲ ದಿನ ಗಳಿಸಿದ್ದು 30 ಕೋಟಿ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಇತ್ತ ಸಲಾರ್ ಸಿನಿಮಾ ಮೊದಲ ದಿನ ಶೋ ವೀಕ್ಷಿಸಿದ ವೀಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಸಿನಿಮಾವನ್ನು ಉಗ್ರಂ ರಿಮೇಕ್ ಎಂದಿದ್ದಾರೆ. ಹಾಗಿದ್ದರೂ ಈ ಸಿನಿಮಾಗಿದ್ದ ಹೈಪ್ ನಿಂದಾಗಿ ಮೊದಲ ದಿನವೇ ಕೋಟಿ ಕೋಟಿ ಬಾಚುವಲ್ಲಿ ಯಶಸ್ವಿಯಾಗಿದೆ.
ಮೂಲಗಳ ಪ್ರಕಾರ ಸಲಾರ್ ಮೊದಲ ದಿನದ ಗಳಿಕೆ 48 ಕೋಟಿ ರೂ. ಆ ಮೂಲಕ ಮೊದಲ ದಿನದ ಗಳಿಕೆಯಲ್ಲಿ ಸಲಾರ್ ಸಿನಿಮಾ ಡಂಕಿಯನ್ನು ಹಿಂದಿಕ್ಕಿದೆ ಎಂದೇ ಹೇಳಬಹುದು. ಇದೀಗ ಕ್ರಿಸ್ ಮಸ್ ನಿಮಿತ್ತ ಸುದೀರ್ಘ ವೀಕೆಂಡ್ ರಜಾ ಇದ್ದು, ಎರಡೂ ಸಿನಿಮಾಗಳ ಗಳಿಕೆಯಲ್ಲಿ ಏರಿಕೆ ನಿರೀಕ್ಷಿಸಲಾಗಿದೆ.