Publish Date: Wed, 10 Aug 2022 (08:30 IST)
Updated Date: Wed, 10 Aug 2022 (08:58 IST)
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಪ್ರಭಾಸ್ ನಾಯಕರಾಗಿ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಸಲಾರ್ ಸಿನಿಮಾ ಸದ್ಯಕ್ಕಂತೂ ರಿಲೀಸ್ ಆಗದು.
ಇದೀಗ ತೆಲುಗು ಸಿನಿಮಾ ನಿರ್ಮಾಪಕರ ಸಂಘದ ಸ್ಟ್ರೈಕ್ ನಿಂದಾಗಿ ಚಿತ್ರೀಕರಣಕ್ಕೆ ಅಡ್ಡಿಯಾಗಿದೆ. ಸಲಾರ್ ಸಿನಿಮಾ ಅರ್ಧದಷ್ಟು ಚಿತ್ರೀಕರಣ ಮುಗಿದಿದೆಯಷ್ಟೇ. ಈಗಿನ ಪ್ರಕಾರ ನೋಡಿದರೆ ಚಿತ್ರೀಕರಣ ಮುಗಿಯಲು ಇನ್ನೂ 7-8 ತಿಂಗಳು ಬೇಕು. ಅಂದರೆ ಮುಂದಿನ ವರ್ಷ ಮಾರ್ಚ್ ಆಗಬಹುದು.
ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಗಿದು ಚಿತ್ರ ಬಿಡುಗಡೆಯಾಗುವಾಗ ಮುಂದಿನ ವರ್ಷ ದಸರಾ ಆಗೋದು ಗ್ಯಾರಂಟಿ ಎನ್ನಲಾಗಿದೆ.