ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ಎರಡನೇ ಭಾಗ ಮೂಡಿಬರುವುದು ಪಕ್ಕಾ ಆಗಿದೆ.
ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ನಡುವೆ ಭಿನ್ನಾಬಿಪ್ರಾಯಗಳಿರುವುದರಿಂದ ಸಲಾರ್ 2 ಶೌರ್ಯಾಂಗ ಪಾರ್ಟ್ ಬರಲ್ಲ ಎಂಬ ಸುದ್ದಿಗಳಿತ್ತು. ಆದರೆ ಇದೆಲ್ಲಾ ಸುಳ್ಳಾಗಿದೆ. ಸಲಾರ್ 2 ಬರುವುದು ಕನ್ ಫರ್ಮ್ ಆಗಿದೆ. ಯಾವಾಗ ಶುರುವಾಗಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಸಲಾರ್ 2 ಸಿನಿಮಾ ಜೂನ್ ನಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಮೊದಲ ಭಾಗದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಕೂಡಾ ಪ್ರಮುಖ ಪಾತ್ರ ಮಾಡಿದ್ದರು. ಇದೀಗ ಈ ಇಬ್ಬರ ದೋಸ್ತಿ ಬಗ್ಗೆಯೇ ಮತ್ತೊಂದು ಕತೆ ಎರಡನೇ ಭಾಗದಲ್ಲಿರಲಿದೆ.
ಇದೀಗ ಪ್ರಭಾಸ್ ಸಲಾರ್ 2 ನೇ ಭಾಗದಲ್ಲಿ ನಟಿಸಲು ಹಸಿರುನಿಶಾನೆ ತೋರಿದ್ದಾರಂತೆ. ಜೂನ್ ಮಧ‍್ಯಭಾಗದಲ್ಲಿ ಸಲಾರ್ 2 ಶುರುವಾಗಲಿದೆ. ಹೊಂಬಾಳೆ ಫಿಲಂಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಪ್ರಶಾಂತ್ ನೀಲ್ ಈಗ ಸ್ಕ್ರಿಪ್ಟ್ ಕೆಲಸಗಳನ್ನು ಬಹುತೇಕ ಮುಗಿಸಿದ್ದಾರೆ ಎನ್ನಲಾಗಿದೆ.