Webdunia - Bharat's app for daily news and videos

Install App

ಸಾಹಸಸಿಂಹ ಡಾ ವಿಷ್ಣುವರ್ಧನ್ ರನ್ನು ನೀವು ಇಂದು ಮರೆಯುವಂತೇ ಇಲ್ಲ

Krishnaveni K
ಸೋಮವಾರ, 30 ಡಿಸೆಂಬರ್ 2024 (08:56 IST)
ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ನಮ್ಮನ್ನು ಅಗಲಿದ್ದು ಇದೇ ದಿನ. ಡಿಸೆಂಬರ್ 30, 2009 ರಲ್ಲಿ ವಿಷ್ಣುವರ್ಧನ್ ಇಹಲೋಕ ತ್ಯಜಿಸಿದ್ದರು. ಇಂದು ಅವರ ಪುಣ್ಯತಿಥಿಯಾಗಿದೆ.

1950 ರಲ್ಲಿ ಜನಿಸಿದ್ದ ವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ ಇಂದಿಗೂ ಸಾಹಸಸಿಂಹನಾಗಿ ಉಳಿದಿದ್ದಾರೆ. ಕೇವಲ 59 ವರ್ಷಗಳಷ್ಟೇ ಅವರು ಬದುಕಿದ್ದು. ಹಾಗಿದ್ದರೂ ಅವರು ಮಾಡಿದ ಒಂದೊಂದು ಚಿತ್ರವೂ ಜನರ ಅಚ್ಚುಮೆಚ್ಚಿನದ್ದಾಗಿತ್ತು.

2009 ರ ಡಿಸೆಂಬರ್ 30 ರಂದು ಪತ್ನಿ ಭಾರತಿ ಜೊತೆ ಮೈಸೂರಿಗೆ ತೆರಳಿದ್ದ ವಿಷ್ಣುವರ್ಧನ್ ಎಂದಿನಂತೆ ಉಳಿದುಕೊಂಡಿದ್ದ ಹೋಟೆಲ್ ಕೊಠಡಿಯಲ್ಲೇ ಇದ್ದರು. ಆ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಹೃದಯಾಘಾತದಿಂದ ವಿಷ್ಣುವರ್ಧನ್ ನಮ್ಮನ್ನಗಲಿದ್ದರು.

ಇಂದು ಅವರ 15 ವರ್ಷಗಳೇ ಕಳೆದಿದೆ. ಅವರ ನೆನಪಿನಲ್ಲಿ ಮೈಸೂರಿನಲ್ಲಿ ನಿರ್ಮಾಣವಾಗಿರುವ ಸ್ಮಾರಕದಲ್ಲಿ ಇಂದು ಕುಟುಂಬಸ್ಥರು ಪೂಜೆ, ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನೊಂದೆಡೆ ಅಭಿಮಾನಿಗಳು ಅವರನ್ನು ಮಣ್ಣು ಮಾಡಲಾಗಿದ್ದ ಅಭಿಮಾನ್ ಸ್ಟುಡಿಯೊದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದಾರೆ. ವಿವಾದಿತ ಸ್ಥಳದಲ್ಲಿ ಈ ಬಾರಿ ಅಭಿಮಾನಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಆದರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಭಿಮಾನಿಗಳೇ ಎಚ್ಚರಿಕೆ ವಹಿಸಬೇಕು ಎಂದು ಪುಣ್ಯಭೂಮಿ ಟ್ರಸ್ಟ್ ಅಧ್ಯಕ್ಷ ತಿಮ್ಮೇಗೌಡ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments