Select Your Language

Notifications

webdunia
webdunia
webdunia
webdunia

ನಿರ್ದೇಶಕ ಎಸ್. ನಾರಾಯಣ್ ಹೆಸರಲ್ಲಿ ವಂಚನೆಗೆ ಯತ್ನ

ನಿರ್ದೇಶಕ ಎಸ್. ನಾರಾಯಣ್ ಹೆಸರಲ್ಲಿ ವಂಚನೆಗೆ ಯತ್ನ
ಬೆಂಗಳೂರು , ಶನಿವಾರ, 9 ಅಕ್ಟೋಬರ್ 2021 (10:00 IST)
ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ, ನಟ ಎಸ್. ನಾರಾಯಣ್ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿ ಖದೀಮರು ಹಣ ವಂಚನೆಗೆ ಯತ್ನಿಸಿದ್ದಾರೆ.


ಈ ಬಗ್ಗೆ ಎಚ್ಚರಿಕೆ ನೀಡಿರುವ ನಿರ್ದೇಶಕ ಎಸ್. ನಾರಾಯಣ್, ಯಾರಾದರೂ ನನ್ನ ಹೆಸರಿನಲ್ಲಿ ಹಣ ಕೇಳಿದರೆ ಕೊಡಲು ಹೋಗಬೇಡಿ. ವಂಚನೆಗೊಳಗಾದರೆ ನಾನು ಜವಾಬ್ಧಾರನಲ್ಲ ಎಂದಿದ್ದಾರೆ.

ನನ್ನ ಫೇಸ್ ಬುಕ್ ಪೋಸ್ಟ್ ಗೆ ಯಾರೂ ಸ್ಪಂದಿಸಬೇಡಿ. ಯಾರೋ ಬೇಕಂತಲೇ ಈ ರೀತಿ ಮಾಡಿ ಹಣ ಮಾಡಲಿಳಿದಿದ್ದಾರೆ. ಇದರ ಬಗ್ಗೆ ಪೊಲೀಸರಿಗೆ ದೂರು ನಿಡುತ್ತಿದ್ದೇನೆ. ಯಾರೂ ವಂಚನೆಗೊಳಗಾಗಬೇಡಿ ಎಂದು ನಾರಾಯಣ್ ಎಚ್ಚರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಿತಾ ಭಟ್ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್