Publish Date: Sat, 26 Mar 2022 (10:54 IST)
Updated Date: Sat, 26 Mar 2022 (10:55 IST)
ಹೈದರಾಬಾದ್: ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಸಹಜವಾಗಿಯೇ ಪ್ರೇಕ್ಷಕರಲ್ಲಿ ಕುತೂಹಲವಿರುತ್ತದೆ. ನಿನ್ನೆ ಬಿಡುಗಡೆಯಾದ ಆರ್ ಆರ್ ಆರ್ ಸಿನಿಮಾಗೂ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.
ಮೂಲಗಳ ಪ್ರಕಾರ ಚಿತ್ರ ಮೊದಲ ದಿನವೇ 200 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ವಿಶ್ವದಾದ್ಯಂತ ಬಿಡುಗಡೆಯಾಗಿರುವ ಆರ್ ಆರ್ ಆರ್ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಸೇರಿ 200 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ.
ಕೇವಲ ಹಿಂದಿ ಭಾಷೆಯಲ್ಲಿ 18 ಕೋಟಿ ರೂ. ಬಾಚಿಕೊಂಡರೆ ತೆಲುಗಿನಲ್ಲಿ 100 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗುತ್ತದೆ. 450 ಕೋಟಿ ರೂ.ನ ಬಜೆಟ್ ನಲ್ಲಿ ಚಿತ್ರ ನಿರ್ಮಾಣವಾಗಿತ್ತು.