"ರೌಂಡ್‌ 2" ಇನ್ಮೇಲೆ ಹಳೆ ಪ್ಯಾಂಟ್ ಆಗಲ್ಲ: ಮತ್ತೇ ಸಿಹಿ ಸುದ್ದಿ ನೀಡಿದ ಪ್ರಣೀತಾ

Sampriya
ಗುರುವಾರ, 25 ಜುಲೈ 2024 (14:56 IST)
Photo Courtesy X
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಪೊರ್ಕಿ ಸಿನಿಮಾದಲ್ಲಿ ಅಭಿನಯಿಸಿದ್ದ ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್‌ ಫೋಟೋ ಹಂಚಿಕೊಂಡಿರುವ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

2021ರಲ್ಲಿ ತಮ್ಮ ಬಹುಕಾಲದ ಗೆಳೆಯ ನಿತಿನ್ ರಾಜು ಅವರನ್ನು ಕೈ ಹಿಡಿದ ಪ್ರಣೀತಾ ಅವರು ಮೊದಲ ಹೆಣ್ಣು ಮಗುವನ್ನು 2022ರಲ್ಲಿ ಬರಮಾಡಿಕೊಂಡರು. ಮಗುವಾದ ನಂತರ ಮತ್ತೇ ಫಿಟ್‌ನೆಸ್‌ ಮಾಡಿಕೊಂಡು, ಸಿನಿಮಾದಲ್ಲಿ ಹಾಗೂ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇನ್ನೂ ಮಗಳೊಂದಿಗಿರುವ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು.

ಇದೀಗ ಮತ್ತೆ ಗರ್ಭಿಣಿ ಆಗಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ. ಅವರ ಅಭಿಮಾನಿಗಳು ಶುಭಾಶಯವನ್ನು ಕೋರುತ್ತಿದ್ದಾರೆ.

ಪ್ರಣೀತಾ ಹಂಚಿಕೊಂಡಿರುವ ಫೋಟೋಗೆ "ರೌಂಡ್‌ 2.. ಇನ್ಮೇಲೆ ಪ್ಯಾಂಟ್‌ಗಳ ಅಳತೆ ಸರಿಹೊಂದಲ್ಲ" ಎಂಬ ಅಡಿಬರಹವನ್ನು ನೀಡಿದ್ದಾರೆ. ಫೋಟೋದಲ್ಲಿ  ಸೈಜ್‌ ಬಾರದ ಜೀನ್ಸ್‌ ಪ್ಯಾಂಟ್‌ ಧರಿಸಿದ ಭಂಗಿಯ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

ಸದ್ಯ ಪ್ರಣೀತಾ ಅವರ ಅಭಿನಯದ ಮಲಯಾಳಂನ 'ತಂಕಮಣಿ' ಸಿನಿಮಾದ ಶೂಟಿಂಗ್‌ ಮುಗಿಸಿದ್ದಾರೆ. ಇನ್ನು ಇವರ ಅಭಿನಯದ ರಾಮನ ಅವತಾರ ಕನ್ನಡ ಸಿನಿಮಾ ಈಚೆಗೆ ಬಿಡುಗಡೆಯಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಲಾವಿದ ನಿತಿನ್ ಶೀವಾಂಶ್ ಜತೆ ಸುಹಾನಾ ಸೈಯ್ಯದ್‌ಗೆ ಪ್ರೀತಿ ಶುರುವಾಗಿದ್ದು ಹೇಗೇ ಗೊತ್ತಾ

ನಮಗೆ ಮಕ್ಕಳು ಬೇಡವೆಂದ ನಟಿ ಸಂಗೀತಾ ಭಟ್‌, ದಿಢೀರನೇ ಆಸ್ಪತ್ರೆಗೆ ದಾಖಲು

ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಜುಗಾರಿ ಕ್ರಾಸ್ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ

ಸಿನಿಮಾ ಸಕ್ಸಸ್ ಖುಷಿ ಮಧ್ಯೆ ದಿಢೀರ್ ಎಚ್ ಡಿ ದೇವೇಗೌಡರನ್ನು ಭೇಟಿಯಾದ ರಿಷಬ್

BBK12: ರಕ್ಷಿತಾಗೆ ಈಡಿಯಟ್ ಎಂದ ಅಶ್ವಿನಿ: ನಟ್ಟು ಬೋಲ್ಟ್ ಟೈಟ್ ಮಾಡಿ ಎಂದ ನೆಟ್ಟಿಗರು: video

ಮುಂದಿನ ಸುದ್ದಿ
Show comments