Select Your Language

Notifications

webdunia
webdunia
webdunia
webdunia

ಸಿಧು ಮೂಸೆವಾಲಾ ಪೋಷಕರಿಗೆ ಎರಡನೇ ಮಗು ಜನನ: ವರ್ಷದ ಹಿಂದೆ ಹತ್ಯೆಯಾಗಿದ್ದ ಪಂಜಾಬಿ ಗಾಯಕ

Sidhu Moose Wala

Sampriya

ಪಂಜಾಬಿ , ಭಾನುವಾರ, 17 ಮಾರ್ಚ್ 2024 (12:05 IST)
Photo Courtesy Facebook
ಪಂಜಾಬಿ: ಮೃತ ಖ್ಯಾತ ಗಾಯಕ ಸಿಧು ಮೂಸೆವಾಲಾ(29) ಅವರ ಪೋಷಕರು ತಮ್ಮ ಎರಡನೇ ಮಗುವನ್ನು ಇಂದು ಸ್ವಾಗತಿಸಿದ್ದಾರೆ.
 
ಈ ವಿಚಾರವನ್ನು ಸಿಧು ತಂದೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು  (ಸಿಧು ಮೂಸೆವಾಲ)ನನ್ನು ಪ್ರೀತಿಸುವ ಕೋಟ್ಯಂತರ ಜನರ ಆಶೀರ್ವಾದದಿಂದ ದೇವರು ಶುಭ್ ಅವರ ಕಿರಿಯ ಸಹೋದರನನ್ನು ನಮ್ಮ ತೋಳಿನಲ್ಲಿ ಹಾಕಿದ್ದಾನೆ. ನಿಮ್ಮ ಆರೈಕೆಗೆ ಚಿರಋಣಿ ಎಂದು ಬರೆದುಕೊಂಡಿದ್ದಾರೆ. 
 
ಭಗವಂತನ ದಯೆಯಿಂದ ತಾಯಿ ಹಾಗೂ ಮಗು ಆರೋಗ್ಯವಾಗಿದೆ ಮತ್ತು ಎಲ್ಲಾ ಹಿತೈಷಿಗಳ ಅಪಾರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ. ಮಾಹಿತಿ ಪ್ರಕಾರ ಸಿಧು ಅವರ ತಾಯಿಗೆ 58 ಮತ್ತು ತಂದೆಗೆ 60 ವರ್ಷ.
 
2022ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿ  ಅದೇ ವರ್ಷದ ಮೇ 29ರಂದು 202ರಲ್ಲಿ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಕೊನೆಯುಸಿರೆಳೆದಿದ್ದರು.  
 
ಮೂಸೆವಾಲನ ಕೊಲೆಯಾದ ನಂತರ ಆತನ ಪೋಷಕರು ತಮ್ಮ ಮಗನಿಗೆ ನ್ಯಾಯ ಕೊಡಿಸುವಂತೆ ಚಳವಳಿ ನಡೆಸಿದರು. ಕೊನೆಯ ಹಾಡಿನ ಮ್ಯೂಸಿಕ್ ವಿಡಿಯೋದಲ್ಲಿ ಜಸ್ಟೀಸ್ ಫಾರ್ ಸಿಧು ಮೂಸೆವಾಲಾ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಲಾಯಿತು. 
 
ಅದಲ್ಲದೆ ಗಾಯಕನ ಪೋಷಕರು ಎರಡನೇ ಮದುವಿನ ನಿರೀಕ್ಷೆಯಲ್ಲಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದೀಗ ಈ ದಂಪತಿ ತಮ್ಮ ಮನೆಗೆ ಗಂಡು ಮಗುವನ್ನು ಸ್ವಾಗತಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರಗಾಲ ಎದುರಿಸಲು ಸಜ್ಜಾಗಿ, ನೀರು ಪೋಲು ಮಾಡದಂತೆ ಸಚಿವ ಮಧು ಬಂಗಾರಪ್ಪ ಮನವಿ