Publish Date: Fri, 10 Jul 2020 (10:21 IST)
Updated Date: Fri, 10 Jul 2020 (10:22 IST)
ಬೆಂಗಳೂರು: ಸುಮಲತಾ ಅಂಬರೀಶ್ ಕೊರೋನಾ ಸೋಂಕಿತರಾಗಿ ಚಿಕಿತ್ಸೆಗೊಳಗಾಗುತ್ತಿರುವ ಸುದ್ದಿಯ ಬೆನ್ನಲ್ಲೇ ಇದೀಗ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆರೋಗ್ಯವೂ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಬಂದಿದೆ.
ಉಸಿರಾಟದ ಸಂಬಂಧೀ ಸಮಸ್ಯೆಯಿಂದಾಗಿ ರಾಕ್ ಲೈನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರಾಗಿರುವ ಅವರ ಪುತ್ರನೇ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಈ ನಡುವೆ ಸುಮಲತಾ ನಿಕಟವರ್ತಿಯಾಗಿರುವ ರಾಕ್ ಲೈನ್ ಗೂ ಕೊರೋನಾ ತಗುಲಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಬಂದಿಲ್ಲ.