ಬೀಜಿಂಗ್: ಜಗತ್ತಿಗೇ ಕೊರೋನಾ ಹರಡಿದ ಚೀನಾ ಈಗ ತನ್ನ ದೇಶದ ವಾಸಿಗಳಿಗೆ ಮತ್ತೊಂದು ಇದಕ್ಕಿಂತಲೂ ಭೀಕರ ರೋಗ ಹರಡುವ ಭೀತಿ ಬಗ್ಗೆ ಎಚ್ಚರಿಕೆ ನೀಡಿದೆ.
ಅನಾಮಧೇಯ ನ್ಯುಮೋನಿಯಾ ರೋಗವೊಂದು ಹರಡುವ ಸಾಧ‍್ಯತೆಯಿದ್ದು, ಎಚ್ಚರಿಕೆಯಿಂದಿರುವಂತೆ ಕಝಕಿಸ್ತಾನದಲ್ಲಿರುವ ಚೀನಾ ರಾಯಭಾರ ಇಲಾಖೆ ಎಚ್ಚರಿಕೆ ನೀಡಿದೆ.
ಈ ಮಹಾಮಾರಿ ಕೊರೋನಾಗಿಂತಲೂ ಭೀಕರವಾಗಿರಲಿದ್ದು, ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಸಂಕಷ್ಟ ತಂದೊಡ್ಡುವ ಸಾಧ‍್ಯತೆಯಿದೆ ಎಂದು ಹೇಳಲಾಗಿದೆ.