ರಾಕಿಂಗ್ ಸ್ಟಾರ್ ಯಶ್ ತಮ್ಮ ಸಿನಿಮಾ ಮುಹೂರ್ತಕ್ಕೆ ಲೈಟ್ ಬಾಯ್ ಕೈಯಲ್ಲೇ ಯಾಕೆ ಕ್ಲಾಪ್ ಮಾಡಿಸ್ತಾರೆ

Krishnaveni K
ಗುರುವಾರ, 8 ಆಗಸ್ಟ್ 2024 (14:11 IST)
Photo Credit: Instagram
ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಗೆ ಇಂದು ಚಾಲನೆ ಸಿಕ್ಕಿದೆ. ಇಂದು ಬೆಳಿಗ್ಗೆ ಚಿತ್ರಕ್ಕೆ ಸರಳವಾಗಿ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಆದರೆ ತಮ್ಮ ಚಿತ್ರಕ್ಕೆ ಯಶ್ ಎಂದಿನಂತೇ ಲೈಟ್ ಬಾಯ್ ಕೈಯಲ್ಲೇ ಕ್ಲಾಪ್ ಮಾಡಿಸಿದ್ದಾರೆ. ಇದು ಯಾಕೆ ಗೊತ್ತಾ?

ಯಶ್ ತಮ್ಮ ಸಿನಿಮಾ ಮುಹೂರ್ತವನ್ನು ಸರಳವಾಗಿಯೇ ಮಾಡಿಕೊಂಡಿದ್ದಾರೆ. ಈ ಹಿಂದೆ ಕೆಜಿಎಫ್ 1 ಸಕ್ಸಸ್ ಆಗಿ ಕೆಜಿಎಫ್ 2 ಸಿನಿಮಾ ಮುಹೂರ್ತವನ್ನೂ ಸರಳವಾಗಿ ದೇವಸ್ಥಾನವೊಂದರಲ್ಲಿ ಮಾಡಿಕೊಂಡಿದ್ದರು. ಯಾವುದೇ ಸ್ಟಾರ್ ನಟರನ್ನು ಮುಹೂರ್ತಕ್ಕೆ ಕರೆಯುವುದಿಲ್ಲ.

ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿಸಿದ್ದಾರೆ. ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಟಾಕ್ಸಿಕ್ ಸಿನಿಮಾ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು ಕೇವಲ ಚಿತ್ರತಂಡ ಮಾತ್ರವೇ ಹಾಜರಿತ್ತು. ಯಶ್, ನಿರ್ಮಾಪಕ ವೆಂಕಟ್ ನಾರಾಯಣ್, ನಿರ್ದೇಶಕಿ ಗೀತು ಮೋಹನ್ ದಾಸ್ ಸೇರಿದಂತೆ ಕೆಲವು ಮಂದಿ ಮಾತ್ರ ಭಾಗಿಯಾಗಿದ್ದರು.

ಈ ವೇಳೆ ಯಶ್ ತಮ್ಮ ಸೆಟ್ ನ ಲೈಟ್ ಬಾಯ್ ನಿಂದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿಸಿದ್ದಾರೆ. ಎಷ್ಟೋ ಮಂದಿ ತಮ್ಮ ಸಿನಿಮಾದ ಮೊದಲ ದೃಶ್ಯಕ್ಕೆ ಖ್ಯಾತನಾಮರಿಂದ ಕ್ಲಾಪ್ ಮಾಡಿಸುವುದು ನೋಡಿದ್ದೇವೆ. ಆದರೆ ಯಶ್ ಮಾತ್ರ ತಮ್ಮ ಹೆಚ್ಚಿನ ಸಿನಿಮಾಗಳಲ್ಲಿ ಲೈಟ್ ಬಾಯ್ ಅಥವಾ ತಂತ್ರಜ್ಞರಿಂದಲೇ ಕ್ಲಾಪ್ ಮಾಡಿಸುತ್ತಾರೆ. ಇದು ಅವರಿಗೆ ತಂತ್ರಜ್ಞರ ಮೇಲಿರುವ ಗೌರವಕ್ಕೆ ಸಾಕ್ಷಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಿಥಿ ಸಿನಿಮಾದಲ್ಲಿ ಗಮನ ಸೆಳೆದಿದ್ದ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಇನ್ನಿಲ್ಲ

ಹೇಮಾ ಮಾಲಿನಿಯನ್ನು ವರಿಸಲು ಧರ್ಮವನ್ನೇ ಬದಲಾಯಿಸಿದ್ರಾ ಧರ್ಮೇಂದ್ರಾ

ರಾಷ್ಟ್ರಪ್ರಶಸ್ತಿ ವಿಜೇತ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ

ಪ್ರೇಮಕಾವ್ಯ ಸೀರಿಯಲ್ ನಟಿ ವೈಷ್ಣವಿ ಎದೆ ದರ್ಶನಕ್ಕೆ ಒಳ್ಳೆ ಡ್ರೆಸ್ ತಗೊಳ್ಳಮ್ಮ ಎಂದು ನೆಟ್ಟಿಗರ ಟ್ರೋಲ್ video

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಧರ್ಮೇಂದ್ರ: ಅಭಿಮಾನಿಗಳ ಹಾರೈಕೆ ಫಲಿಸಿತು

ಮುಂದಿನ ಸುದ್ದಿ
Show comments