Select Your Language

Notifications

webdunia
webdunia
webdunia
webdunia

ಹಿಂದಿ ಮಾತಾಡಿದ್ದಕ್ಕೆ ಯಶ್ ಟ್ರೋಲ್: ಆದರೆ ಅಸಲಿ ವಿಷಯವೇ ಬೇರೆ!

ಹಿಂದಿ ಮಾತಾಡಿದ್ದಕ್ಕೆ ಯಶ್ ಟ್ರೋಲ್: ಆದರೆ ಅಸಲಿ ವಿಷಯವೇ ಬೇರೆ!
ಬೆಂಗಳೂರು , ಬುಧವಾರ, 15 ಫೆಬ್ರವರಿ 2023 (08:40 IST)
Photo Courtesy: Instagram
ಬೆಂಗಳೂರು: ಮೊನ್ನೆಯಷ್ಟೇ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದ ಕರ್ನಾಟಕದ ಸಿನಿಮಾ ಸ್ಟಾರ್ ಗಳು ಬಳಿಕ ಮಾಧ‍್ಯಮಗಳ ಮುಂದೆ ತಮ್ಮ ಅನುಭವ ಹಂಚಿಕೊಂಡಿದ್ದರು.

ಈ ವೇಳೆ ರಾಕಿಂಗ್ ಸ್ಟಾರ್ ಯಶ್ ಪ್ರಧಾನಿ ಮೋದಿ ಭೇಟಿ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡುವಾಗ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾತನಾಡಿದ್ದರು. ಇದಕ್ಕೆ ಕೆಲವರು ಯಶ್ ರನ್ನು ಟ್ರೋಲ್ ಮಾಡಿದ್ದರು. ಕನ್ನಡ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಅಸಲಿಗೆ ಕಾರಣ ಬೇರೆಯೇ ಇದೆ. ಯಶ್ ಈ ರೀತಿ ಸಂದರ್ಶನ ನೀಡಿದ್ದು ಪ್ರಧಾನಿ ಮೋದಿಯವರ ಯೂ ಟ್ಯೂಬ್ ಚಾನೆಲ್ ಗೆ. ಹೀಗಾಗಿ ಅವರು ಹಿಂದಿ ಮತ್ತು ಇಂಗ್ಲಿಷ್ ಮಿಶ್ರಿತ ಭಾಷೆಯಲ್ಲಿ ಮಾತನಾಡಿದರು. ಇದರಲ್ಲೂ ತಪ್ಪು ಹುಡುಕಬೇಡಿ ಎಂದು ಯಶ್ ಅಭಿಮಾನಿಗಳು ಸಮರ್ಥನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ವಾರ್ಷಿಕೋತ್ಸವದ ಜೊತೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಡಾರ್ಲಿಂಗ್ ಕೃಷ್ಣ ದಂಪತಿ’