Select Your Language

Notifications

webdunia
webdunia
webdunia
webdunia

ಒಪ್ಪಿಕೊಂಡ ಕಾರ್ಯಕ್ರಮ ತಪ್ಪಿಸಲ್ಲ: ಅಭಿಮಾನಿಗಳ ದಾಂಧಲೆಗೆ ಕಿಚ್ಚ ಸುದೀಪ್ ಸ್ಪಷ್ಟನೆ

ಒಪ್ಪಿಕೊಂಡ ಕಾರ್ಯಕ್ರಮ ತಪ್ಪಿಸಲ್ಲ: ಅಭಿಮಾನಿಗಳ ದಾಂಧಲೆಗೆ ಕಿಚ್ಚ ಸುದೀಪ್ ಸ್ಪಷ್ಟನೆ
ದಾವಣಗೆರೆ , ಶುಕ್ರವಾರ, 10 ಫೆಬ್ರವರಿ 2023 (08:50 IST)
Photo Courtesy: Twitter
ದಾವಣಗೆರೆ: ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚ ಸುದೀಪ್ ಬರಲಿಲ್ಲ ಎಂದು ದಾಂಧಲೆ ನಡೆಸಿದ ಅಭಿಮಾನಿಗಳಿಗೆ ಸ್ವತಃ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

‘ಸ್ನೇಹಿತರಿಗೆ ನಮಸ್ಕಾರ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆದ ಘಟನೆ ತಿಳಿದು ಬೇಸರವಾಯಿತು. ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ. ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ. ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸುವವನಲ್ಲ. ಆದರೂ ಇಂದು ನಡೆದ ಘಟನೆ ಬಗ್ಗೆ ತೀವ್ರ ವಿಷಾದವಿದೆ. ನಿಮ್ಮ ಜೊತೆ ಬೆರೆಯಲು ನನಗೂ ಸದಾ ಅತೀವ ಆಸೆ. ಮುಂದೆ ಖಂಡಿತಾ ಬರುವೆ. ಪ್ರೀತಿ ಇರಲಿ. ಶಾಂತ ರೀತಿಯಿಂದ ವರ್ತಿಸಿ’ ಎಂದು ಸುದೀಪ್ ಮನವಿ ಮಾಡಿದ್ದಾರೆ.

ಘಟನೆ ಹಿನ್ನಲೆ: ದಾವಣಗೆರೆಯಲ್ಲಿ ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚ ಸುದೀಪ್ ಬರುತ್ತಾರೆಂದು ಸುದ್ದಿ ಹಬ್ಬಿತ್ತು. ಹೀಗಾಗಿ ಅವರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ ಸುದೀಪ್ ಬರಲಿಲ್ಲವೆಂದು ರೊಚ್ಚಿಗೆದ್ದ ಅಭಿಮಾನಿಗಳು ಕುರ್ಚಿಗಳನ್ನು ಮುರಿದು, ಘೋಷಣೆ ಕೂಗಿ ದಾಂಧಲೆ ಮಾಡಿದರು.

ಆದರೆ ಸುದೀಪ್ ‍ ನಿವಾಸಕ್ಕೆ ತೆರಳಿ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಆಹ್ವಾನ ನೀಡಿದ್ದರು. ಆದರೆ ಆಗ ಸುದೀಪ್ ಇರಲಿಲ್ಲ. ಹೀಗಾಗಿ ಅವರ ತಂದೆ ಕೈಗೆ ಆಹ್ವಾನ ನೀಡಿದ್ದರು. ಆದರೆ ಇದರ ಬಗ್ಗೆ ಸುದೀಪ್ ಗೆ ಮಾಹಿತಿಯಿರಲಿಲ್ಲವೆನಿಸುತ್ತದೆ. ಅಂತೂ ಆಹ್ವಾನ ಕುರಿತ ಗೊಂದಲದಿಂದಾಗಿ ಇಷ್ಟೆಲ್ಲಾ ರದ್ದಾಂತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಸಿನಿಮಾದಿಂದ ಹೊರಬಂದರಾ ತ್ರಿಶಾ? ವೈಮನಸ್ಯದ ಬಗ್ಗೆ ತ್ರಿಶಾ ತಾಯಿ ಸ್ಪಷ್ಟನೆ