Publish Date: Thu, 08 Oct 2020 (09:09 IST)
Updated Date: Thu, 08 Oct 2020 (09:11 IST)
ಬೆಂಗಳೂರು: ಕೆಜಿಎಫ್ 2 ಬಗ್ಗೆ ಒಂದೇ ಒಂದು ಅಪ್ ಡೇಟ್ ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ನಿರ್ಮಾಪಕರು ಭರ್ಜರಿ ಸುದ್ದಿ ಕೊಟ್ಟಿದ್ದಾರೆ.
ನಿರ್ಮಾಪಕ ಕಾರ್ತಿಕ್ ಗೌಡ ನಿನ್ನೆ ಸಂಜೆ ಇಂದಿನಿಂದ ರಾಕಿಂಗ್ ಸ್ಟಾರ್ ಯಶ್ ಫೈನಲ್ ಶೂಟಿಂಗ್ ಗಾಗಿ ಚಿತ್ರತಂಡ ಕೂಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಟ್ವೀಟ್ ಮೂಲಕ ತಿಳಿಸುತ್ತಿದ್ದಂತೇ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ತಿಂಗಳೊಳಗಾಗಿ ಚಿತ್ರೀಕರಣ ಪೂರ್ತಿಯಾಗಲಿದ್ದು, ಅದಾದ ಬಳಿಕ ಚಿತ್ರ ಬಿಡುಗಡೆಯ ಪ್ರಕ್ರಿಯೆ ಶುರುವಾಗಲಿದೆ ಎಂದು ಹೇಳಿ ಅಭಿಮಾನಿಗಳಲ್ಲಿ ಸಂಚಲನವುಂಟು ಮಾಡಿದ್ದಾರೆ. ಹೀಗಾಗಿ ಕೆಜಿಎಫ್ 2 ಇದೇ ವರ್ಷವೇ ಬಿಡುಗಡೆಯಾದರೂ ಅಚ್ಚರಿಯಿಲ್ಲ ಎನ್ನಬಹುದು.