Publish Date: Wed, 07 Oct 2020 (10:05 IST)
Updated Date: Wed, 07 Oct 2020 (10:06 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರನ್ನು ಆರಾಧಿಸುವ ಎಷ್ಟೋ ಅಭಿಮಾನಿಗಳಿದ್ದಾರೆ. ಆದರೆ ಈ ಅಭಿಮಾನಿಯ ಅಭಿಮಾನಕ್ಕೆ ಸ್ವತಃ ಪವರ್ ಸ್ಟಾರ್ ಮಾತು ಹೊರಡದೇ ನಿಂತಿದ್ದಾರೆ.
ಅಭಿಮಾನಿಯೊಬ್ಬ ಮೊಣಕೈ ಬಳಸಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಕ್ಷಣಾರ್ಧದಲ್ಲಿ ಬಿಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅಪ್ಪು ‘ಈ ಅಭಿಮಾನಕ್ಕೆ, ಅಭಿಮಾನಿಗಳ ಬಗ್ಗೆ ಏನು ಹೇಳಲಿ? ಕಲೆಗೆ ಬೆಲೆ ಕಟ್ಟಲಾಗಲ್ಲ ನಿಜ, ಆದರೆ ಅಭಿಮಾನಿಗಳ ಪ್ರೀತಿಗೂ ಬೆಲೆ ಕಟ್ಟಲಾಗಲ್ಲ. ಮಾತುಗಳಲ್ಲಿ ಏನೂ ಹೇಳೋದಕ್ಕೆ ಆಗಲ್ಲ. ತುಂಬಾ ತುಂಬಾ ಥ್ಯಾಂಕ್ಸ್’ ಎಂದು ಅಭಿಮಾನಿಯ ವಿಡಿಯೋ ಪ್ರಕಟಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.