Publish Date: Tue, 25 Oct 2022 (16:10 IST)
Updated Date: Tue, 25 Oct 2022 (16:12 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿ ಮಕ್ಕಳೊಂದಿಗೆ ದೀಪಾವಳಿ ಹಬ್ಬದ ಸಂಭ್ರಮದ ಕ್ಷಣಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಯಶ್ ಮತ್ತು ರಾಧಿಕಾ ಮಕ್ಕಳಾದ ಐರಾ ಮತ್ತು ಯಥರ್ವ್ ಜೊತೆ ಪಟಾಕಿ ಹಚ್ಚಿ ದೀಪಾವಳಿ ಹಬ್ಬ ಆಚರಣೆ ಮಾಡುವ ಫೋಟೋ ಪ್ರಕಟಿಸಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.
ಯಶ್ ಫೋಟೋ ಪ್ರಕಟಿಸಿದ 49 ನಿಮಿಷಗಳಲ್ಲೇ 1 ಮಿಲಿಯನ್ ಲೈಕ್ಸ್ ಪಡೆದು ಯಶ್ ಅತೀ ವೇಗವಾಗಿ 1 ಮಿಲಿಯನ್ ಲೈಕ್ಸ್ ಪಡೆದ ದಾಖಲೆ ಮಾಡಿದ್ದಾರೆ. ಕೆಜಿಎಫ್ ಸಿನಿಮಾ ಬಳಿಕ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಹೀಗಾಗಿ ಅವರ ಮುದ್ದು ಫ್ಯಾಮಿಲಿ ಫೋಟೋಗೆ ಇಷ್ಟೊಂದು ಲೈಕ್ಸ್ ಸಿಕ್ಕಿದೆ.
-Edited by Rajesh Patil