Select Your Language

Notifications

webdunia
webdunia
webdunia
webdunia

ಕೆಜಿಎಫ್ ದಾಖಲೆ ಮುರಿದ ಕಾಂತಾರ

ಕೆಜಿಎಫ್ ದಾಖಲೆ ಮುರಿದ ಕಾಂತಾರ
ಬೆಂಗಳೂರು , ಸೋಮವಾರ, 24 ಅಕ್ಟೋಬರ್ 2022 (17:04 IST)
ಬೆಂಗಳೂರು: ದೇಶದೆಲ್ಲೆಡೆ ವಿವಿಧ ಭಾಷೆಗಳಲ್ಲಿ ಅಬ್ಬರಿಸುತ್ತಿರುವ ಕಾಂತಾರ ಸಿನಿಮಾ ಈಗ ಕರ್ನಾಟಕದಲ್ಲಿ ಹೊಸ ದಾಖಲೆ ಮಾಡಿದೆ.

ರಿಷಬ್ ಶೆಟ್ಟಿ ನಿರ್ದೇಶನ, ಆಕ್ಟಿಂಗ್ ಗೆ ಜನ ಫಿದಾ ಆಗಿದ್ದಾರೆ. ಎಲ್ಲಾ ವರ್ಗದ ಮಂದಿ ಬಂದು ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ.

ಈ ಮೂಲಕ ವೀಕ್ಷಣೆ ವಿಚಾರದಲ್ಲಿ ಕೆಜಿಎಫ್ 2 ದಾಖಲೆಯನ್ನೂ ಕರ್ನಾಟಕದಲ್ಲಿ ಕಾಂತಾರ ಮುರಿದಿದೆ. ಕಾಂತಾರ ಸಿನಿಮಾವನ್ನು ಇದುವರೆಗೆ 77 ಲಕ್ಷ ಮಂದಿ ವೀಕ್ಷಣೆ ಮಾಡಿದ್ದು, ಇದು ಕೆಜಿಎಫ್ 2 ಗಿಂತಲೂ ಅಧಿಕ ಎಂದು ಹೊಂಬಾಳೆ ಫಿಲಂಸ್ ಹೇಳಿದೆ. ಬಿಡುಗಡೆಯಾಗಿ ಒಂದು ತಿಂಗಳಾಗುತ್ತಾ ಬಂದರೂ ಈಗಲೂ ಥಿಯೇಟರ್ ಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿರುವುದು ಚಿತ್ರದ ಹೆಗ್ಗಳಿಕೆಯಾಗಿದೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಗಂಧದ ಗುಡಿ ಸಿನಿಮಾಗೆ ಬುಕಿಂಗ್ ಆರಂಭ