Publish Date: Fri, 09 Oct 2020 (09:46 IST)
Updated Date: Fri, 09 Oct 2020 (09:48 IST)
ಮಂಗಳೂರು: ಕೆಜಿಎಫ್ 2 ಚಿತ್ರೀಕರಣ ಲಾಕ್ ಡೌನ್ ಮತ್ತೆ ಶುರುವಾಗಿದೆ. ಫೈನಲ್ ಹಂತದ ಚಿತ್ರೀಕರಣ ಶುರು ಮಾಡಿಕೊಂಡಿರುವ ಚಿತ್ರತಂಡ ಸದ್ಯಕ್ಕೆ ಕಡಲತಡಿ ಮಂಗಳೂರಿನಲ್ಲಿ ಬೀಡುಬಿಟ್ಟಿದೆ.
ಮಂಗಳೂರಿನ ಸಮುದ್ರ ಕಿನಾರೆಯಲ್ಲಿ ರಾಕಿ ಭಾಯ್ ಲುಕ್ ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಯಶ್ ಖಡಕ್ ಸಂದೇಶ ಕೊಟ್ಟಿದ್ದಾರೆ. ‘ಅಲೆಗಳನ್ನು ಹಿಡಿದಿಟ್ಟುಕೊಳ್ಳಲಾಗದು, ಬದಲಾಗಿ ಅದರ ಜತೆಗೇ ಈಜಬಹುದು. ಬಹಳ ದಿನಗಳ ವಿರಾಮದ ಬಳಿಕ. ಮತ್ತೆ ರಾಕಿ ಭಾಯ್ ಪಯಣ ಶುರು’ ಎಂದು ಯಶ್ ಬರೆದುಕೊಂಡಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.