Publish Date: Fri, 09 Oct 2020 (09:27 IST)
Updated Date: Fri, 09 Oct 2020 (09:28 IST)
ಬೆಂಗಳೂರು: ಲಾಕ್ ಡೌನ್ ಆಗುವುದಕ್ಕೆ ಕೆಲವೇ ದಿನಗಳ ಮೊದಲು ರಿಲೀಸ್ ಆದ ಸಿನಿಮಾಗಳು ನಿರ್ಮಾಪಕರ ಜೇಬು ತುಂಬಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೆಲವು ಸಿನಿಮಾಗಳು ರಿ ರಿಲೀಸ್ ಆಗಲಿವೆ.
ಇನ್ನೇನು ಥಿಯೇಟರ್ ಗಳು ಮರಳಿ ತೆರೆಯಲಿದ್ದು, ತಕ್ಷಣಕ್ಕೇ ಹೊಸ ಸಿನಿಮಾ ಬಿಡುಗಡೆಯಾಗುವ ಸಾಧ‍್ಯತೆ ಕಡಿಮೆ. ಶೇ. 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಾಗಿರುವ ಕಾರಣ ನಿರ್ಮಾಪಕರು ಹೊಸ ಸಿನಿಮಾಗಳನ್ನು ರಿಲೀಸ್ ಮಾಡುವ ಬದಲು ಈ ಮೊದಲು ರಿಲೀಸ್ ಆಗಿ ಅರ್ಧಕ್ಕೇ ನಿಂತ ಸಿನಿಮಾಗಳನ್ನು ರಿ ರಿಲೀಸ್ ಮಾಡುವ ಸಾಧ‍್ಯತೆ ಹೆಚ್ಚು. ಈಗಾಗಲೇ ಲವ್ ಮಾಕ್ ಟೈಲ್, ಜಂಟಲ್ ಮ್ಯಾನ್ ಸಿನಿಮಾ ರಿ ರಿಲೀಸ್ ಮಾಡುತ್ತಿರುವುದಾಗಿ ಘೋಷಣೆ ಮಾಡಲಾಗಿದೆ. ಇದೇ ರೀತಿ ಇನ್ನಷ್ಟು ಸಿನಿಮಾಗಳು ರಿ ರಿಲೀಸ್ ಆಗುವ ಸಾಧ‍್ಯತೆಯಿದೆ.