Publish Date: Mon, 07 Nov 2022 (08:30 IST)
Updated Date: Mon, 07 Nov 2022 (08:59 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹೊಸ ಲುಕ್ ನಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.
ಕೆಜಿಎಫ್ 2 ಬಳಿಕ ಯಶ್ ಯಾವುದೇ ಹೊಸ ಸಿನಿಮಾ ಘೋಷಿಸಿರಲಿಲ್ಲ. ಆದರೆ ಇತ್ತೀಚೆಗೆ ರೇಸ್, ಶೂಟಿಂಗ್ ತರಬೇತಿ ಪಡೆಯುತ್ತಿದ್ದರು. ಇದೀಗ ಕೆಜಿಎಫ್ ನಲ್ಲಿದ್ದಂತೇ ಉದ್ದ ಕೂದಲು ದಾಡಿ ಬಿಟ್ಟುಕೊಂಡಿರುವ ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಪದೇ ಪದೇ ಅವರು ಮುಂಬೈಗೆ ಬಂದು ಹೋಗುತ್ತಿರುವುದು ಗಮನಿಸಿದರೆ ಯಶ್ ಮುಂದಿನ ಸಿನಿಮಾ ಬಾಲಿವುಡ್ ನಲ್ಲಿರಬಹುದೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
-Edited by Rajesh Patil