Publish Date: Sun, 06 Nov 2022 (08:50 IST)
Updated Date: Sun, 06 Nov 2022 (09:16 IST)
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.
ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಎಷ್ಟು ಎಂಬುದು ಈಗ ಬಯಲಾಗಿದೆ. ಕೇವಲ 18 ಕೋಟಿ ರೂ. ಗಳಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಈಗ ಎಲ್ಲಾ ಭಾಷೆಗಳಲ್ಲಿ ಸೇರಿ 305 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಹಿಂದಿ ಭಾಷೆಯಲ್ಲಿ ತಡವಾಗಿ ರಿಲೀಸ್ ಆದರೂ 51.65 ಕೋಟಿ ರೂ. ಬಾಚಿದೆ. ಹಿಂದಿಗೆ ಡಬ್ ಆಗಿದ್ದ ಪರಭಾಷೆ ಸಿನಿಮಾವೊಂದು ಗಳಿಸಿದ ಕಲೆಕ್ಷನ್ ಪಟ್ಟಿಯಲ್ಲಿ ಕಾಂತಾರ ಈಗ 7 ನೇ ಸ್ಥಾನದಲ್ಲಿದೆ. ಕನ್ನಡದಲ್ಲಿ ಮಾತ್ರ ಸಿನಿಮಾ 150 ಕೋಟಿ ಗೂ ಅಧಿಕ ಗಳಿಕೆ ಮಾಡಿದೆ. ಈ ಮೂಲಕ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಪಡೆಯುವುದು ಹೇಗೆ ಎಂದು ಈ ಸಿನಿಮಾ ತೋರಿಸಿಕೊಟ್ಟಿದೆ.
-Edited by Rajesh Patil