Webdunia - Bharat's app for daily news and videos

Install App

ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮ ದಿನಕ್ಕೆ ಅಭಿಮಾನಿಗಳ ತಯಾರಿ ಹೇಗಿದೆ ಗೊತ್ತಾ?

Webdunia
ಬುಧವಾರ, 8 ಜನವರಿ 2020 (09:13 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ. ಕಳೆದ ಬಾರಿ ರೆಬಲ್ ಸ್ಟಾರ್ ಅಂಬರೀಶ್ ನಿಧನದ ಗೌರವಾರ್ಥ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದ ಯಶ್ ಗೆ ಈ ಬಾರಿ ಅಭಿಮಾನಿಗಳೇ ಅದ್ಧೂರಿ ಬರ್ತ್ ಡೇ ಮಾಡುತ್ತಿದ್ದಾರೆ.


ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆದ ಯಶ್ ಗೆ ವಿವಿಧ ಭಾಷೆಯ, ರಾಜ್ಯಗಳ ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆಯಾಗುತ್ತಿದೆ.

ಇನ್ನು, ಯಶ್ ಬರ್ತ್ ಡೇ ನಿಮಿತ್ತ ಇಂದು ಕೆಜಿಎಫ್ 2 ಸಿನಿಮಾದ ಎರಡನೇ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡುತ್ತಿದೆ. ಟೀಸರ್ ಕಾರಣಾಂತರಗಳಿಂದ ಬಿಡುಗಡೆ ಮಾಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ಖುಷಿ ಕೊಡಲಿದ್ದಾರೆ.

ಇನ್ನು ಯಶ್ ಬರ್ತ್ ಡೇ ನಿಮಿತ್ತ ನಂದಿ ಲಿಂಕ್  ಗ್ರೌಂಡ್ ನಲ್ಲಿ ಅಭಿಮಾನಿಗಳೇ ಸೇರಿಕೊಂಡು ರಾಕಿಂಗ್ ಉತ್ಸವ ಮಾಡುತ್ತಿದ್ದಾರೆ. ಇದಕ್ಕಾಗಿ ಮೆಜೆಸ್ಟಿಕ್ ನಿಂದ ನಂದಿ ಲಿಂಕ್ ಗ್ರೌಂಡ್ಸ್ ಗೆ ಉಚಿತ ಬಸ್ ಸೇವೆ ಒದಗಿಸಲಾಗಿದೆ. ಇನ್ನು ಯಶ್ ಗೆಂದೇ ಮಾಡಲಾಗಿದ್ದ 5000 ಕೆಜಿ ತೂಕದ ಬೃಹತ್ ಕೇಕ್ ನ್ನು ಯಶ್ ಪತ್ನಿ ರಾಧಿಕಾ ಜತೆಗೆ ಕಟ್ ಮಾಡಿ ರಾಕಿಂಗ್ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಇದಲ್ಲದೆ ಬೃಹತ್ ಕಟೌಟ್ ಕೂಡಾ ಅನಾವರಣಗೊಂಡಿದೆ. ಅಂತೂ ಇಂದಿಡೀ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ರಾಕಿ ಬಾಯ್ ಹುಡುಗರು ಉತ್ಸವದಂತೆ ಆಚರಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮುಂದಿನ ಸುದ್ದಿ
Show comments