Publish Date: Sun, 17 Dec 2023 (08:40 IST)
Updated Date: Sun, 17 Dec 2023 (09:15 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಇಂದು ಜನ್ಮದಿನದ ಸಂಭ್ರಮ. ಈ ಬಾರಿ ಅವರು ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.
ಇಷ್ಟು ವರ್ಷ ಹುಟ್ಟುಹಬ್ಬವನ್ನು ನಿಮ್ಮ ಜೊತೆ ಆಚರಿಸಿಕೊಳ್ಳಲು ಆಗಲಿಲ್ಲ. ಈ ಬಾರಿಯೂ ಎಲ್ಲರ ಜೊತೆ ಆಚರಿಸಿಕೊಳ್ಳುವ ಮನಸ್ಥಿತಿಯಲ್ಲಿಲಲ್ಲ. ಆದರೂ ಅಭಿಮಾನಿಗಳಿ ಒತ್ತಾಸೆಗಾಗಿ ನಿಮ್ಮ ಜೊತೆ ಕಳೆಯಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ನೀಡಿರುವ ಶ್ರೀಮುರಳಿ ಇಂದು ಬೆಳಿಗ್ಗೆ 10.30 ರಿಂದ ದೇವರಾಜ್ ಅರಸ್ ಭವನ್, ಮಿಲ್ಲರ್ಸ್ ರಸ್ತೆಯಲ್ಲಿ ಅಭಿಮಾನಿಗಳಿಗೆ ಸಿಗುವುದಾಗಿ ಹೇಳಿದ್ದಾರೆ. ನಿಮಗಾಗಿ ಈ ದಿನ ಆಚರಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಆದರೂ ಹುಟ್ಟುಹಬ್ಬದ ದಿನ ಕಾಣಲು ಬರುವವರಿಗೆ ಒಂದು ಷರತ್ತು ವಿಧಿಸಿದ್ದಾರೆ. ಯಾವುದೇ ಕಾರಣಕ್ಕೂ ನನಗೆ ಕೇಕ್, ಹಾರ, ಗಿಫ್ಟ್ ತರಲು ಹೋಗಬೇಡಿ. ಖಾಲಿ ಕೈಯಲ್ಲಿ ಬನ್ನಿ. ದಯವಿಟ್ಟು ನಿಮ್ಮ ದುಡಿಮೆಯ ಹಣ ಇದಕ್ಕೆಲ್ಲಾ ಖರ್ಚು ಮಾಡಿ ಹಾಳು ಮಾಡಬೇಡಿ. ಹಾಗೂ ಒಂದು ವೇಳೆ ನಿಮಗೆ ಖರ್ಚು ಮಾಡಬೇಕೆಂದಿದ್ದರೆ ಯಾರಿಗಾದರೂ ಒಳ್ಳೆಯದು ಮಾಡಲು ಖರ್ಚು ಮಾಡಿ ಎಂದಿದ್ದಾರೆ.