Select Your Language

Notifications

webdunia
webdunia
webdunia
webdunia

ಪ್ರಶಸ್ತಿ ಪುರಸ್ಕೃತ ʼಶಿವಮ್ಮʼ ಸಿನಿಮಾ ತೆರೆಗೆ ತರಲು ದಿನ ಫಿಕ್ಸ್‌ ಮಾಡಿದ ರಿಷಭ್‌ ಶೆಟ್ಟಿ

Shivamma Film

sampriya

ಬೆಂಗಳೂರು , ಸೋಮವಾರ, 3 ಜೂನ್ 2024 (19:47 IST)
Photo By X
ಬೆಂಗಳೂರು: ಜೈ ಶಂಕರ್‌ ನಿರ್ದೇಶನದ,  ರಿಷಭ್‌ ಶೆಟ್ಟಿ ನಿರ್ಮಾಣದಲ್ಲಿ ಮೂಡಿಬಂದಿರುವ ಬೂಸಾನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ನ್ಯೂ ಕರೆಂಟ್ಸ್‌’ ವಿಭಾಗದಲ್ಲಿ ಪ್ರಶಸ್ತಿ ಪಡೆದ  ‘ಶಿವಮ್ಮ’ ಸಿನಿಮಾ ಜೂನ್‌ 14ರಂದು ಬಿಡುಗಡೆಯಾಗಲಿದೆ.

ಜೈಶಂಕರ್‌ ಆರ್ಯರ್‌ ನಿರ್ದೇಶನದ ಈ ಚಿತ್ರದಲ್ಲಿ ಯರೇಹಂಚಿನಹಾಳದ ಶರಣಮ್ಮ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಚಿತ್ರದ ಟ್ರೇಲರ್‌ ಇಂದು ಬಿಡುಗಡೆಯಾಗಿದೆ.

ಇನ್ನೂ ಚಿತ್ರದ ಬಗ್ಗೆ ಮಾತನಾಡಿರುವ ರಿಷಭ್‌ ಶೆಟ್ಟಿ ಅವರು, ‘ಒಂದು ಕಿರುಚಿತ್ರೋತ್ಸವದ ಮೂಲಕ ನನಗೆ ದೊರೆತ ಪ್ರತಿಭೆ ಜೈಶಂಕರ್‌. ‘ಕಥಾಸಂಗಮ’ ಸಿನಿಮಾದಲ್ಲಿ ಏಳು ಕಥೆಗಳಲ್ಲಿ ಒಂದು ಕಥೆ ಇವರದ್ದು. ‘ಶಿವಮ್ಮ’ ಕೂಡಾ ಒಂದು ಕಮರ್ಷಿಯಲ್‌ ಸಿನಿಮಾ. ಇಡೀ ಊರಿನ ಜನರಿಗೆ ನಟನೆಯ ತರಬೇತಿ ನೀಡಿ ಮಾಡಿದ ಸಿನಿಮಾ ಇದಾಗಿದ್ದು,  ಖ್ಯಾತ ಚಲನಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ ಎಂದು ಖುಷಿ ವ್ಯಕ್ತಪಡಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ ಉರ್ಫಿ ಜಾವೇದ್‌ ಮುಖಕ್ಕೆ ಏನಾಯಿತು, ಫೋಟೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು