ಹಳೇ ಕ್ರಶ್ ರಮ್ಯಾಗೆ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ, ರಾಜ್ ಶೆಟ್ಟಿ

Webdunia
ಶುಕ್ರವಾರ, 21 ಜುಲೈ 2023 (08:30 IST)
ಬೆಂಗಳೂರು: ನಟಿ ರಮ್ಯಾ ಹಾಸ್ಟೆಲ್ ಹುಡುಗರು ಸಿನಿಮಾ ತಂಡದ ಮೇಲೆ ನೋಟಿಸ್ ನೀಡಿ ಕೊನೆಯ ಕ್ಷಣದಲ್ಲಿ ಚಿತ್ರ ಬಿಡುಗಡೆಗೆ ಅಡ್ಡಿಯಾಗುವ ಆತಂಕ ಸೃಷ್ಟಿಸಿದ್ದರು.

ಅನುಮತಿಯಿಲ್ಲದೇ ತಮ್ಮ ದೃಶ್ಯಗಳನ್ನು ಟ್ರೈಲರ್ ನಲ್ಲಿ ಬಳಸಿರುವುದಕ್ಕೆ ರಮ್ಯಾ ಲೀಗಲ್ ನೋಟಿಸ್ ನೀಡಿದ್ದರು. ಇದರಿಂದ ಚಿತ್ರ ಬಿಡುಗಡೆಗೆ ಆತಂಕ ಎದುರಾಗಿತ್ತು. ಆದರೆ ನ್ಯಾಯಾಲಯದಲ್ಲಿ ತಡೆ ಅರ್ಜಿ ತಳ್ಳಿ ಹಾಕಿದ್ದರಿಂದ ಚಿತ್ರ ಬಿಡುಗಡೆ ಸುಗಮವಾಯಿತು.

ಈ ಬಗ್ಗೆ ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಿಷಬ್ ತಮ್ಮ ಹಳೆಯ ಕ್ರಶ್ ರಮ್ಯಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಹಾಸ್ಟೆಲ್ ಹುಡುಗರು ಸಿನಿಮಾದ ಮೇಲಿನ ತಡೆ ತೆರವುಗೊಳಿಸುತ್ತಿದ್ದಂತೇ ಟ್ವೀಟ್ ಮಾಡಿರುವ ರಿಷಬ್ ‘ನ್ಯಾಯ ಅಂದರೆ ನ್ಯಾಯ.. ಜೈ ಆಂಜನೇಯ!! ನಾಳೆ ಹಾಸ್ಟೆಲ್ ಹುಡುಗರು ರಿಲೀಸ್ ಆಗ್ತಿದೆ. ಥಿಯೇಟರ್ ನಲ್ಲಿ ಸಿಗೋಣ’ ಎಂದಿದ್ದಾರೆ.

ಇನ್ನು ರಾಜ್ ಬಿ ಶೆಟ್ಟಿ ಕೂಡಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಹಾಸ್ಟೆಲ್ ಹುಡುಗರು ಬಗ್ಗೆ ಬರೆದುಕೊಂಡಿದ್ದು, ಈಗ ಎಲ್ಲೆಲ್ಲಿ ಬೆಂಕಿ ಬೀಳುತ್ತೋ ನೋಡೋಣ’ ಎಂದು ರಮ್ಯಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ವಿಶೇಷವೆಂದರೆ ರಾಜ್ ಬಿ ಶೆಟ್ಟಿ ರಮ್ಯಾ ನಿರ್ಮಾಣದ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದು, ಆ ಸಿನಿಮಾ ಇನ್ನೂ ಬಿಡುಗಡೆಯಾಗಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ಕಾಜೋಲ್ ಗೆ ಸಾರ್ವಜನಿಕವಾಗಿ ಮುಜುಗರ: ಖಾಸಗಿ ಭಾಗ ಸ್ಪರ್ಶಿಸಿದ ವ್ಯಕ್ತಿ, ನಟಿಯ ರಿಯಾಕ್ಷನ್ ನೋಡಿ

ನಾನು ಮನೆಯಿಂದಲೇ ಊಟ ಕಳುಹಿಸುತ್ತೇನೆ, ಸಹೋದರ ಸೋನಮ್ ಉಪವಾಸ ಸತ್ಯಾಗ್ರಹ ಕೈಬಿಡಿ: ಸಲ್ಮಾನ್ ಖಾನ್ ಮನವಿ

ತೆರೆಗೆ ಅಪ್ಪಲಿಸಿದ ಜನ ನಾಯಗನ್: ಮುಖ್ಯಮಂತ್ರಿಯನ್ನು ಬೆಳ್ಳಿತೆರೆಯಲ್ಲಿ ಕಂಡು ಅಭಿಮಾನಿಗಳು ಫುಟ್‌ಖುಷ್‌

ವಿದ್ಯಾರ್ಥಿಗಳ ಹೋರಾಟ ಅವರದ್ದೇ ಆಗಿರಲಿ, ರಾಜಕೀಯ ಬೇಡ: ದೆಹಲಿ ಪ್ರತಿಭಟನೆ ಬಗ್ಗೆ ಸಲ್ಮಾನ್ ಖಾನ್ ಬೇಸರ

ದೇಶದಾದ್ಯಂತ ಏಕಕಾಲದಲ್ಲಿ ಬಿಗ್‌ಬಾಸ್‌ ಹವಾ ಶುರು: ಜಿಯೋಸ್ಟಾರ್ ಸಂಸ್ಥೆಯಿಂದ ಮಹತ್ವದ ಅಪ್‌ಡೇಟ್‌

ಮುಂದಿನ ಸುದ್ದಿ
Show comments