Publish Date: Mon, 17 Jul 2023 (09:00 IST)
Updated Date: Mon, 17 Jul 2023 (09:12 IST)
Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಡಾಲಿ ಧನಂಜಯ್ ಜೊತೆಗೆ ಉತ್ತರಕಾಂಡ ಸಿನಿಮಾದಲ್ಲಿ ಅಭನಯಿಸುತ್ತಿದ್ದಾರೆ.
ಸಿನಿಮಾ ಬಿಟ್ಟು 10 ವರ್ಷಗಳಾದರೂ ರಮ್ಯಾಗೆ ಬೇಡಿಕೆ ಕಡಿಮೆಯಾಗಿರಲಿಲ್ಲ. ಈಗ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿರುವ ಕಾರಣಕ್ಕೆ ರಮ್ಯಾ ಸಾಕಷ್ಟು ವರ್ಕೌಟ್ ಮಾಡುತ್ತಿದ್ದು ದೇಹ ತೂಕ ಇಳಿಸಿಕೊಂಡಿದ್ದಾರೆ.
ಸಖತ್ ಸ್ಲಿಮ್ ಆಗಿರುವ ರಮ್ಯಾ ವಾಷ್ ರೂಂ ಕನ್ನಡಿ ಮುಂದೆ ನಿಂತು ಸೆಲ್ಫೀ ವಿಡಿಯೋ ಮಾಡುತ್ತಾ ಡ್ಯಾನ್ಸ್ ಮಾಡುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ರಮ್ಯಾ ಮೊದಲಿನಂತೆ ಸ್ಲಿಮ್ ಆಗಿರುವುದನ್ನು ಗುರುತಿಸಿದ್ದಾರೆ.