Select Your Language

Notifications

webdunia
webdunia
webdunia
webdunia

ಡಾರ್ಲಿಂಗ್ ಕೃಷ್ಣ ಸಿನಿಮಾಗಳಲ್ಲಿ ನೀವೂ ಯಾಕಿರ್ತೀರಿ? ಮಿಲನಾ ನಾಗರಾಜ್ ಗೆ ಪ್ರಶ್ನೆ

ಡಾರ್ಲಿಂಗ್ ಕೃಷ್ಣ ಸಿನಿಮಾಗಳಲ್ಲಿ ನೀವೂ ಯಾಕಿರ್ತೀರಿ? ಮಿಲನಾ ನಾಗರಾಜ್ ಗೆ ಪ್ರಶ್ನೆ
ಬೆಂಗಳೂರು , ಸೋಮವಾರ, 17 ಜುಲೈ 2023 (08:10 IST)
ಬೆಂಗಳೂರು: ಮದುವೆಯ ಬಳಿಕ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ದಂಪತಿ ಎಲ್ಲೇ ಹೋದರೂ ಏನೇ ಮಾಡಿದರೂ ಜೊತೆಗೇ ಎನ್ನುವಂತಾಗಿದೆ. ಡಾರ್ಲಿಂಗ್ ಕೃಷ್ಣ ಸಿನಿಮಾಗಳಲ್ಲೂ ಮಿಲನಾ ಇದ್ದೇ ಇರುತ್ತಾರೆ.

ಆದರೆ ಇದೇ ವಿಚಾರ ಈಗ ಟ್ರೋಲ್ ಗೆ ಕಾರಣವಾಗಿದೆ. ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ಶಶಾಂಕ್ ನಿರ್ದೇಶನದ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಜುಲೈ 28 ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾದಲ್ಲೂ ಮಿಲನಾ ಕೆಲವೇ ಕ್ಷಣಗಳ ಪುಟ್ಟ ಪಾತ್ರ ಮಾಡಿದ್ದು, ಪ್ರಚಾರದ ಸಂದರ್ಭದಲ್ಲಿ ಹೀರೋಯಿನ್ ಗಿಂತ ಹೆಚ್ಚು ಕೃಷ್ಣ ಜೊತೆಗೆ ಅವರೇ ಇರುತ್ತಾರೆ.

ಇದನ್ನು ಗಮನಿಸಿದ ಕೆಲವು ನೆಟ್ಟಿಗರು ಡಾರ್ಲಿಂಗ್ ಕೃಷ್ಣರ ಎಲ್ಲಾ ಸಿನಿಮಾಗಳಲ್ಲೂ ನೀವೂ ಯಾಕೆ ಇರ್ತೀರಿ? ಕೆಲವು ಸಿನಿಮಾಗಳಲ್ಲಾದರೂ ಅವರನ್ನು ಒಬ್ಬರೇ ಬಿಡಿ ಎಂದು ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

22 ವರ್ಷಕ್ಕೇ ನಾನದನ್ನು ಅನುಭವಿಸಿದೆ: ಸೂರ್ಯ ಜೊತೆಗಿನ ಫೋಟೋ ಶೇರ್ ಮಾಡಿದ ರಮ್ಯಾ