Select Your Language

Notifications

webdunia
webdunia
webdunia
webdunia

ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಕಿಚ್ಚ ಸುದೀಪ್

ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಕಿಚ್ಚ ಸುದೀಪ್
ಬೆಂಗಳೂರು , ಶನಿವಾರ, 15 ಜುಲೈ 2023 (17:59 IST)
ಬೆಂಗಳೂರು: ತಮ್ಮ ವಿರುದ್ಧ ಆರೋಪ ಮಾಡಿದ್ದ ನಿರ್ಮಾಪಕರಾದ ಎಂಎನ್ ಕುಮಾರ್, ಸುರೇಶ್, ರೆಹಮಾನ್ ವಿರುದ್ಧ ಕಿಚ್ಚ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತಮ್ಮ ವಕೀಲರ ಜೊತೆಗೆ ಕಿಚ್ಚ ಸುದೀಪ್ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಆಗಮಿಸಿ ಕಿಚ್ಚ ಸುದೀಪ್ ಮೊಕದ್ದಮೆ ದಾಖಲಿಸಿದ್ದಾರೆ. ಮೊದಲು ತಮ್ಮ ವಿರುದ್ಧ ಆರೋಪ ಮಾಡಿದ್ದ ನಿರ್ಮಾಪಕರಿಗೆ ಬೇಷರತ್ ಕ್ಷಮೆ ಯಾಚಿಸಲು ಆಗ್ರಹಿಸಿದ್ದರು. ಇಲ್ಲದೇ ಹೋದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು. ಹಾಗಿದ್ದರೂ ನಿರ್ಮಾಪಕರು ತಮ್ಮ ವಿರುದ್ಧ ಹಣಕಾಸಿನ ವಂಚನೆ ಆರೋಪ ಮುಂದುವರಿಸಿದ್ದರಿಂದ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಮೊದಲು ಎಂಎನ್ ಕುಮಾರ್ ಮತ್ತು ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಸಿನಿಮಾ ಮಾಡುವುದಾಗಿ ಅಡ್ವಾನ್ಸ್ ಪಡೆದು ಹಲವು ವರ್ಷಗಳೇ ಆಗಿವೆ. ಇನ್ನೂ ಸಿನಿಮಾಗೂ ಡೇಟ್ಸ್ ಕೊಟ್ಟಿಲ್ಲ, ಅಡ್ವಾನ್ಸ್ ಕೂಡಾ ವಾಪಸ್ ಮಾಡಿಲ್ಲ ಎಂದು ಆರೋಪಿಸಿದ್ದರು. ಬಳಿಕ ಸುದೀಪ್ ಜೊತೆ ಹುಚ್ಚ ಸಿನಿಮಾ ಮಾಡಿದ್ದ ನಿರ್ಮಾಪಕ ರೆಹಮಾನ್ ಕೂಡಾ ಸುದೀಪ್ ರಿಂದ ನನಗೆ 35 ಲಕ್ಷ ನಷ್ಟವಾಗಿದೆ. ನನ್ನ ಹಣ ಮರಳಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.  ಇದೀಗ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್ 17 ರಂದು ಕೈಗೆತ್ತಿಕೊಳ್ಳಲಿದೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೀರಾ ಒಳ್ಳೆಯವನಾಗಬೇಡ! ಹೀಗಂತ ಮಾವ ಸುನಿಲ್ ಶೆಟ್ಟಿ ಕೆಎಲ್ ರಾಹುಲ್ ಗೆ ಸಲಹೆ ನೀಡಿದ್ದೇಕೆ?!