Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಯುಎಸ್ ಬಾಕ್ಸ್ ಆಫೀಸ್‍ನಲ್ಲಿ ಗಳಿಸಿದೆಷ್ಟು ಗೊತ್ತಾ?

ರಿಷಬ್ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಯುಎಸ್ ಬಾಕ್ಸ್ ಆಫೀಸ್‍ನಲ್ಲಿ ಗಳಿಸಿದೆಷ್ಟು ಗೊತ್ತಾ?
ಬೆಂಗಳೂರು , ಮಂಗಳವಾರ, 2 ಅಕ್ಟೋಬರ್ 2018 (11:04 IST)
ಬೆಂಗಳೂರು : ರಿಷಬ್ ಶೆಟ್ಟಿ ನಿರ್ದೇಶಿಸಿದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲದೇ ಮೊಟ್ಟ ಮೊದಲ ಬಾರಿಗೆ ಅಂಡಮಾನ್ ಹಾಗೂ ನಿಕೋಬಾರ್ ನಲ್ಲಿ ಈ ಚಿತ್ರ ಪ್ರದರ್ಶನವಾಗಿ ದಾಖಲೆ ಬರೆದಿದೆ. ಇದೀಗ ಈ ಚಿತ್ರ ಅಮೆರಿಕದಲ್ಲೂ ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿದೆ.


ಚಲನಚಿತ್ರ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಅವರು ಚಿತ್ರದ ಬಗ್ಗೆ ಟ್ವೀಟ್ ಮಾಡಿ “ಕನ್ನಡ ಚಿತ್ರ ಅಮೆರಿಕಾದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ. ಅಮೆರಿಕದ ಕೆಲವು ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರ ಟೈಟಲ್ ಹಾಗೂ ಸ್ಕೋರ್ಸ್ ನಿಂದಲೇ ಸೆ. 29ರ ವರೆಗೂ ಯುಎಸ್ ಬಾಕ್ಸ್ ಆಫೀಸ್‍ನಲ್ಲಿ 85,509 ಡಾಲರ್(62.04 ಲಕ್ಷ ರೂ.) ಕಲೆಕ್ಷನ್ ಆಗಿದೆ” ಎಂದು ಟ್ವೀಟ್ ಮಾಡಿದ್ದಾರೆ.


ನಿಮ್ಮ ಈ ಟ್ವೀಟ್ ನಮಗೆ ತುಂಬಾ ಪ್ರೇರಣೆ ನೀಡಿದೆ. ನಿಮ್ಮ ಅಪ್‍ಡೇಟ್‍ಗೆ ಧನ್ಯವಾದಗಳು” ಎಂದು ಬರೆದು ನಿರ್ದೇಶಕ ಎಂದು ರಿಷಬ್ ಶೆಟ್ಟಿ ತರಣ್ ಅದರ್ಶ್ ಅವರ ಟ್ವೀಟ್ ನ್ನು ರೀ-ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾನಾ ಪಾಟೇಕರ್ ಮೇಲೆ ಆರೋಪ ಮಾಡಿದ್ದಕ್ಕೆ ನಟಿ ತನುಶ್ರೀ ದತ್ತಾ ಕಾರಿನ ಮೇಲೆ ದಾಳಿ