Select Your Language

Notifications

webdunia
webdunia
webdunia
webdunia

ಪಿತೃ ಪಕ್ಷದಲ್ಲಿ ಮನೆಯ ಹೆಣ್ಣುಮಕ್ಕಳಿಗೆ ಹೀಗೆ ಮಾಡಿದರೆ ಲಕ್ಷ್ಮೀ ಸದಾಕಾಲ ಆ ಮನೆಯಲ್ಲಿರುತ್ತಾಳಂತೆ

ಪಿತೃ ಪಕ್ಷದಲ್ಲಿ ಮನೆಯ ಹೆಣ್ಣುಮಕ್ಕಳಿಗೆ ಹೀಗೆ ಮಾಡಿದರೆ ಲಕ್ಷ್ಮೀ ಸದಾಕಾಲ ಆ ಮನೆಯಲ್ಲಿರುತ್ತಾಳಂತೆ
ಬೆಂಗಳೂರು , ಮಂಗಳವಾರ, 2 ಅಕ್ಟೋಬರ್ 2018 (10:30 IST)
ಬೆಂಗಳೂರು : ಮನೆಯಲ್ಲಿ ಮೃತರಾದ ಹಿರಿಯರ ಆತ್ಮಕ್ಕೆ ಶಾಂತಿ ನೀಡಿ ಅವರನ್ನು ತೃಪ್ತಿಗೊಳಿಸುವ ಕಾರ್ಯವನ್ನು ಪಿತೃ ಪಕ್ಷದಲ್ಲಿ ಮಾಡುತ್ತಾರೆ. ಪಿತೃಗಳಿಗೆ ಎಡೆಯಿಟ್ಟು ಶ್ರಾರ್ದ ಮಾಡುವ ಪದ್ದತಿಯು ಹಿಂದೂ ಧರ್ಮದಲ್ಲಿದೆ. ಈ ರೀತಿ ಮಾಡುವುದು ಮಾತ್ರ ಪಿತೃಪಕ್ಷದ ವಿಶೇಷವಲ್ಲ. ಜೊತೆಗೆ ಮಹಾಲಕ್ಷ್ಮೀ ಪೂಜೆ ಮಾಡಿದರೂ ಕೂಡ ಒಳ್ಳೆದಾಗುತ್ತದೆ. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.


ಮನೆಯ ಹೆಣ್ಣುಮಕ್ಕಳನ್ನು ಮಹಾಲಕ್ಷ್ಮೀಗೆ ಹೋಲಿಸಲಾಗುತ್ತದೆ. ಆದ್ದರಿಂದ ಪಿತೃಪಕ್ಷದಲ್ಲಿ ಮನೆಯ ಹೆಣ್ಣಮಕ್ಕಳಿಗೆ ವಿಶೇಷ ಭೋಜನ ಮಾಡಿಸಬೇಕು. ಇದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾಳಂತೆ. ಆದ್ದರಿಂದ ಶನಿವಾರ ಬಾದಾಮಿ ಹಲ್ವ ಮಾಡಿ ತಿನಿಸಬೇಕು. ಭಾನುವಾರ ಜೇನುತುಪ್ಪ ಬೇರೆಸಿದ ಆಹಾರ ನೀಡಬೇಕು, ಸೋಮವಾರ ಅಕ್ಕಿ ಪಾಯಸ ಮಾಡಿ ಬಡಿಸಬೇಕು, ಮಂಗಳವಾರ ಜಾಂಗೀರ್ ನೀಡಬೇಕು, ಬುಧವಾರ ಸಬ್ಬಕ್ಕಿ ಪಾಯಸ ಮಾಡಬೇಕು, ಗುರುವಾರ ಕಡಲೆಹಿಟ್ಟಿನ ಹಲ್ವ ಮಾಡಬೇಕು, ಶುಕ್ರವಾರ ಪಾಯಸ ತಿನಿಸಿದರೆ ಒಳ್ಳೆಯದು. ಒಂದು ವೇಳೆ ಮನೆಯಲ್ಲಿ ಹೆಣ್ಣಮಕ್ಕಳು ಇಲ್ಲವಾದರೆ ವಿವಾಹಿತ ಬ್ರಾಹ್ಮಣ ಮಗಳಿಗೆ ಕಳಸ, ಹೂ, ಸುಗಂಧ, ಸಕ್ಕರೆ, ತುಪ್ಪ ದಾನ ಮಾಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿ ನದಿ ಅಥವಾ ಕಣಿವೆಯನ್ನು ದಾಟಬಾರದು ಎಂದು ಹಿರಿಯರು ಹೇಳುವುದ್ಯಾಕೆ ಗೊತ್ತಾ?