Publish Date: Tue, 16 Jul 2019 (09:41 IST)
Updated Date: Tue, 16 Jul 2019 (09:44 IST)
ಬೆಂಗಳೂರು: ರಿಷಬ್ ಶೆಟ್ಟಿ ಸಿನಿಮಾ ಕೆಲಸಗಳಲ್ಲಿ ಎಷ್ಟು ಅಚ್ಚುಕಟ್ಟಾಗಿ ತೊಡಗಿಕೊಳ್ಳುತ್ತಾರೆ ಎಂದು ಎಲ್ಲರಿಗೂ ಗೊತ್ತೇ ಇದೆ. ಇದೀಗ ರಿಷಬ್ ತಮ್ಮ ಹೊಸ ಸಿನಿಮಾ ತಂಡದೊಂದಿಗೆ ಕಾಡು ಮೇಡು ಅಲೆಯುತ್ತಿದ್ದಾರೆ!
ಜನ್ಮದಿನದಂದು ತಮ್ಮ ಮುಂದಿನ ನಿರ್ದೇಶನದ ಸಿನಿಮಾ ರುದ್ರಪ್ರಯಾಗ ಎಂದು ರಿಷಬ್ ಘೋಷಿಸಿಕೊಂಡಿದ್ದರು. ಅದರಂತೆ ಈಗ ಸಿನಿಮಾಗೆ ಬೇಕಾದ ತಯಾರಿಯಲ್ಲಿದ್ದಾರೆ.
ಅದರಂತೆ ಪಶ್ಚಿಮ ಘಟ್ಟದ ಕಾಡು ಮೇಡಿನಲ್ಲಿ ಅಲೆಯುತ್ತಾ ತಮ್ಮ ಸಿನಿಮಾಗೆ ಬೇಕಾದ ಲೊಕೇಷನ್ ಹುಡುಕಾಟದಲ್ಲಿದ್ದಾರೆ. ರಿಷಬ್ ಜತೆಗೆ ಅವರ ಸಿನಿ ಸ್ನೇಹಿತರ ತಂಡವೂ ಇದೆ. ಇಲ್ಲಿನ ಸುಂದರ ತಾಣಗಳಲ್ಲಿ ತಮಗೆ ಬೇಕಾದ ಲೊಕೇಷನ್ ಹುಡುಕಾಟದಲ್ಲಿ ಬ್ಯುಸಿಯಾಗಿರುವ ರಿಷಬ್ ಸದ್ಯದಲ್ಲೇ ಚಿತ್ರೀಕರಣವನ್ನೂ ಪ್ರಾರಂಭಿಸಲಿದ್ದಾರೆ.