Select Your Language

Notifications

webdunia
webdunia
webdunia
webdunia

ಮನೆ ಬಿಡೋವಾಗ ನಟ ಸುಶಾಂತ್ ಸಿಂಗ್ ಮೇಲೆ ರಿಯಾ ಚಕ್ರವರ್ತಿ ಸಿಟ್ಟು ಎಷ್ಟಿತ್ತು ಗೊತ್ತಾ?

ನಟ ಸುಶಾಂತ ಸಿಂಗ್ ರಜಪೂತ್
ಮುಂಬೈ , ಭಾನುವಾರ, 23 ಆಗಸ್ಟ್ 2020 (17:10 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ.

ಈ ನಡುವೆ ನಟ ಸುಶಾಂತ್ ಸಿಂಗ್ ರ ಮನೆಯನ್ನು ಬಿಟ್ಟು ಹೊರಹೋಗುವಾಗ ನಟಿ ರಿಯಾ ಚಕ್ರವರ್ತಿಯ ವರ್ತನೆ ಹೇಗಿತ್ತು ಅನ್ನೋದು ಬಹಿರಂಗವಾಗಿದೆ.

ಸುಶಾಂತ್ ಸಿಂಗ್ ರಜಪೂತ್ ರ ಮನೆಯ ಸಹಾಯಕನ ವಿಚಾರಣೆ ವೇಳೆ ಈ ವಿಷಯ ತಿಳಿದು ಬಂದಿದ್ದು, ಮನೆ ಬಿಟ್ಟು ಹೋಗುವಾಗ ನಟಿ ರಿಯಾ ಚಕ್ರವರ್ತಿ ಭಾರೀ ಕೋಪದಲ್ಲಿದ್ದರಂತೆ.

ಮನೆ ಕೆಲಸದ ನೀರಜ್ ನನ್ನು ಕರೆದ ರಿಯಾ ಚಕ್ರವರ್ತಿ ತನ್ನ ಬ್ಯಾಗ್ ಪ್ಯಾಕ್ ಮಾಡೋಕೆ ಸಿಟ್ಟಿನಿಂದಲೇ ಹೇಳಿದ್ದರಂತೆ.

ನಟ ಸುಶಾಂತ್ ಸಿಂಗ್ ರಜಪೂತ್ ಅಲ್ಲಿಯೇ ಬಹಳ ಸಮಯ ಕುಳಿತಿದ್ದರು. ಆದರೂ ನಟಿ ರಿಯಾ ಚಕ್ರವರ್ತಿ ರಾತ್ರಿ ಊಟ ಮಾಡದೇ ಮನೆ ಬಿಟ್ಟು ಹೊರ ಹೋದರು ಎಂದು ನೀರಜ್ ಹೇಳಿದ್ದಾಗಿ ವರದಿಯಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಈ ಬೆಡಗಿಗೆ ಜನ್ಮದಿನದಂದೂ ಅವರದ್ದೇ ಚಿಂತೆಯಂತೆ!