Select Your Language

Notifications

webdunia
webdunia
webdunia
webdunia

ಜೈಲು ಸೇರುತ್ತಿದ್ದರೂ ಒಂಚೂರು ಬದಲಾಗದ ಪವಿತ್ರಾ ಗೌಡ ವರಸೆ, ಸುಬ್ಬಿ ಗರಂ ಆಗಿದ್ಯಾಕೆ

ಪವಿತ್ರ ಗೌಡ ಅರೆಸ್ಟ್

Sampriya

ಬೆಂಗಳೂರು , ಗುರುವಾರ, 14 ಆಗಸ್ಟ್ 2025 (15:46 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧ ಎ1 ಆರೋಪಿ ಪವಿತ್ರಾ ಗೌಡ ಅವರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.ವಶಕ್ಕೆ ಪಡೆಯಲು ಪವಿತ್ರಾ ಮನೆಗೆ ಪೊಲೀಸರು ಹೋಗುತ್ತಿದ್ದ ಹಾಗೇ ಆಕೆ ಕೆಲವೊಂದು ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿರುವುದು ಇದೀಗ ತಿಳಿದುಬಂದಿದೆ. 

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಈ ಹಿಂದೆಯೂ ಪೊಲೀಸರು ಅರೆಸ್ಟ್‌ ಬಂದಿದ್ದ ವೇಳೆ ಮಾಧ್ಯಮದವರ ಮುಂದೇ ತಮ್ಮ ಅಹಂ ಅನ್ನು ತೋರಿಸಿದ್ದರು. ತನ್ನ ವಿಚಾರವಾಗಿ ಒಂದು ವ್ಯಕ್ತಿಯ ಕೊಲೆ ನಡೆದಿದೆ ಎಂದು ಗಂಭೀರ ಪ್ರಕರಣ ನಡೆದಿದ್ದರು, ಪೊಲೀಸರು ಅರೆಸ್ಟ್ ಮಾಡಲು ಬಂದಾಗ ಮೆಟ್ಟಿಲು ಇಳಿದುಕೊಂಡು ಬರುತ್ತಿರುವ ವೇಳೆ ಅಹಂಕಾರದ ನಡವಳಿಕೆಯನ್ನು ತೋರಿಸಿದ್ದರು. ಇದು ಭಾರೀ ಟೀಕೆಗೂ ಗುರಿಯಾಗಿತ್ತು.

ಇಂದು ಜಾಮೀನು ಅರ್ಜಿ ವಜಾ ಮಾಡಿ  ಸುಪ್ರೀಂ ಕೋರ್ಟ್‌ 7 ಮಂದಿ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ ಬೆನ್ನಲ್ಲೇ ಪೊಲೀಸರು ಪವಿತ್ರಾ ಮನೆಗೆ ಹೋಗಿದ್ದಾರೆ. 

ಈ ವೇಳೆ ವಕೀಲರನ್ನು ಮುಂದಿಟ್ಟು ಹಲವು ಪ್ರಶ್ನೆಗಳನ್ನು ಪವಿತ್ರಾ ಕೇಳಿದ್ದಾಳೆ. ಈ ವೇಳೆ ಸುಪ್ರೀಂ ಕೋರ್ಟ್ ಆದೇಶ ಪ್ರತಿ ಹಾಗೂ ಅರೆಸ್ಟ್‌ ಪ್ರತಿ ನೋಡಿ ಪವಿತ್ರಾ ಪೊಲೀಸರ ಜತೆ ತೆರಳಲು ಸುಮ್ಮನಾಗಿದ್ದಾಳೆ.

ಇನ್ನೂ ಮೆಟ್ಟಿಲು ಇಳಿದು ಬರುವ ವಿಡಿಯೋವನ್ನು ಪೊಲೀಸರು ಮಾಡಲು ಹೋದಾಗ ಅದರಿಂದ ಕೋಪಗೊಂಡ ಪವಿತ್ರಾ ತಲೆ ಚಚ್ಚಿಕೊಂಡು, ತಕಾರು ಎತ್ತಿದ್ದಾಳೆ. ಗುನುಗುತ್ತಲೇ ಮೆಟ್ಟಿಲು ಇಳಿದು ಬಂದು ಟೆಕ್ಷನ್‌ನಲ್ಲಿಯೇ ಪೊಲೀಸ್ ಜೀಪು ಹತ್ತಿದ್ದಾಳೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರು ಅರೆಸ್ಟ್ ಮಾಡಲು ಕಾಯ್ತಿದ್ದರೆ ದರ್ಶನ್ ಎಲ್ಲಿದ್ದಾರೆ ನೋಡಿ