ಬೆಂಗಳೂರು: ದರ್ಶನ್ ಅಣ್ಣಗೆ ಒಳ್ಳೆಯ ಸಮಯ ಬಂದೇ ಬರುತ್ತೆ. ಅವರ ಬಗ್ಗೆ ದೇವರಲ್ಲಿ ನನ್ನದೊಂದು ಪ್ರಾರ್ಥನೆ ಇಂದೇ ಇರುತ್ತದೆ ಎಂದು ನಟ ವಿಜಯ್ ರಾಘವೇಂದ್ರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಆಕ್ಟೀವ್ ಆಗಿರುವ ವಿಜಯ್ ರಾಘವೇಂದ್ರ ಅವರಲ್ಲಿ ಅಭಿಮಾನಿಗಳು ದರ್ಶನ್ ಅವರ ಬಗ್ಗೆ ಮಾತನಾಡಿ ಎಂದು ಕೇಳುತ್ತಿದ್ದಾರೆ. ಈ ವಿಚಾರವಾಗಿ ವಿಜಯ್ ರಾಘವೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ.
ಖಂಡಿತವಾಗಿಯೂ ನಾನು ಅವರ ಬಗ್ಗೆ ಮಾತನಾಡುತ್ತೇನೆ. ದರ್ಶನ್ ಅವರು ನನಗೆ ಹಾಗೂ ನಮ್ಮ ಕುಟುಂಬಕ್ಕೆ ತುಂಬಾನೇ ಆತ್ಮೀಯರು. ನಾನು ಅವರನ್ನು ದರ್ಶನ್ ಅಣ್ಣ ಅಂತಾನೇ ಕರೆಯುವುದು. ಅವರ ಡೆವಿಲ್ ಸಿನಿಮಾ ಬಿಡುಗಡೆ ಸಜ್ಜಾಗುತ್ತಿದೆ. ನಾವೆಲ್ಲ ಸಿನಿಮಾಗೋಸ್ಕರ ಕಾಯುತ್ತಿದ್ದೇವೆ. ಅವರಿಗೆ ಒಳ್ಳೆಯ ಸಮಯ ಬಂದೇ ಬರುತ್ತದೆ. ಅವರ ಆರೋಗ್ಯ ಹಾಗೂ ಮನಸ್ಥಿತಿ ಬಗ್ಗೆ ದೇವರಲ್ಲಿ ನನ್ನದೊಂದು ಪ್ರಾರ್ಥನೆ ಇದ್ದೆ ಇರುತ್ತದೆ.
ದರ್ಶನ್ ಅವರ ಪತ್ನಿ ಹಾಗೂ ಮಗ ಬಗ್ಗೆಯೂ ನಮ್ಮದೊಂದು ಪ್ರಾರ್ಥನೆ ಇದ್ದೇ ಇರುತ್ತದೆ ಎಂದಿದ್ದಾರೆ.