Webdunia - Bharat's app for daily news and videos

Install App

ಅಂಬಿ ಮನೆಗೆ ಮತ್ತೆ ಬಂದ ಅಂಬರೀಶ್: ಮಗುವಿಗೆ ಜನ್ಮವಿತ್ತ ಅವಿವಾ

Krishnaveni K
ಮಂಗಳವಾರ, 12 ನವೆಂಬರ್ 2024 (11:18 IST)
Photo Credit: X
ಬೆಂಗಳೂರು: ಅಂಬಿ ಮನೆಗೆ ಮತ್ತೆ ಅಂಬರೀಶ್ ಆಗಮನವಾಗಿದೆ. ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿಡಪ್ಪಾ ಗಂಡು ಮಗುವಿಗೆ ಜನ್ಮವಿತ್ತಿದ್ದು, ಸುಮಲತಾ ಮಗುವಿನ ಜೊತೆಗಿರುವ ಫೋಟೋ ರಿವೀಲ್ ಆಗಿದೆ.

ರೆಬಲ್ ಸ್ಟಾರ್ ಅಂಬರೀಶ್ ಹೋದ ಮೇಲೆ ಅಂಬಿ ಮನೆಯಲ್ಲಿ ಶೂನ್ಯ ಆವರಿಸಿತ್ತು. ಅದನ್ನು ಈ ಮಗು ತುಂಬಲಿದೆ ಎಂದೇ ಕುಟುಂಬದವರು ಅಂದುಕೊಂಡಿದ್ದಾರೆ. ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಮಗುವಿನ ಜೊತೆ ಸುಮಲತಾ ಪೋಸ್ ನೀಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಗುವಿನ ಫೋಟೋ ನೋಡಿದ ಅಭಿಮಾನಿಗಳು, ಮಗು ಥೇಟ್ ರೆಬಲ್ ಸ್ಟಾರ್ ಅಂಬರೀಶ್ ರನ್ನು ಹೋಲುತ್ತಿದೆ. ಮಂಡ್ಯದ ಗಂಡು ವಾಪಸ್ ಬಂದ್ರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಅವಿವಾ ಸೀಮಂತ ಶಾಸ್ತ್ರವನ್ನು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನೆರವೇರಿಸಲಾಗಿತ್ತು. ತಮ್ಮ ದೊಡ್ಡ ಮಗ ಎಂದೇ ಕರೆಯುವ ದರ್ಶನ್ ಬಂಧನದಲ್ಲಿರುವುದರಿಂದ ಅಭಿಷೇಕ್ ಮತ್ತು ಸುಮಲತಾ ಸೀಮಂತವನ್ನೂ ಸರಳವಾಗಿ ನೆರವೇರಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

ಮುಂದಿನ ಸುದ್ದಿ
Show comments