Publish Date: Sun, 12 Jul 2026 (11:43 IST)
Updated Date: Sun, 12 Jul 2026 (11:44 IST)
Photo Credit: Social media
ಮೈಸೂರು: ಗಾನಕೋಗಿಲೆ ಎಸ್ ಜಾನಕಿಯವರು ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಖಾಯಿಲೆ ಎಂದಾದರೂ ಅವರು ಇತ್ತೀಚೆಗೆ ಕುಗ್ಗಿ ಹೋಗಲು ಇದೇ ಕಾರಣವಾಯ್ತಾ ಎನ್ನಲಾಗುತ್ತಿದೆ.
ಎಸ್ ಜಾನಕಿಯವರು ಕೇವಲ ತಮ್ಮ ಕುಟುಂಬದವರಿಗೆ ಮಾತ್ರವಲ್ಲ, ಅವರನ್ನು ಯಾರೇ ಮಾತನಾಡಿಸಿದರೂ ಅವರಲ್ಲೊಬ್ಬ ಅಮ್ಮನನ್ನು ಕಾಣಬಹುದಾಗಿತ್ತು. ಅಂಥಾ ಮಾತೃಹೃದಯಿ ಆಕೆ. ವೈಯಕ್ತಿಕ ಜೀವನದಲ್ಲೂ ಪತಿ ಜೊತೆಗೆ ಸುಂದರ ಜೀವನ ನಡೆಸಿದವರು.
ಅವರ ಒಬ್ಬನೇ ಒಬ್ಬ ಮಗ ಮುರಳಿ ಕೃಷ್ಣ. ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದವರು. ಮಗನ ಮೇಲೆ ಅವರಿಗೆ ಅಪಾರ ಪ್ರೀತಿಯಿತ್ತು. ಆದರೆ ಅನಾರೋಗ್ಯದಿಂದಾಗಿ ಅವರು ಇತ್ತೀಚೆಗೆ ನಿಧನರಾಗಿದ್ದರು.
ಇದಾದ ಬಳಿಕ ಎಸ್ ಜಾನಕಿ ತೀರಾ ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಮಗನ ಸಾವಿನ ಕೊರಗು ಅವರನ್ನು ಕಾಡುತ್ತಲೇ ಇತ್ತು. ಇದೇ ಕೊರಗಿನಿಂದಲೇ ಅವರ ಆರೋಗ್ಯ ಕ್ಷೀಣಿಸಿರಬಹುದು. ಇದುವೇ ಅವರ ಸಾವಿಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಆದರೂ ಮೊನ್ನೆ ಮೊನ್ನೆಯವರೆಗೂ ತಮ್ಮಿಂದ ಆದಷ್ಟು ದೇವರ ಸೇವೆ, ಪೂಜೆ ಮಾಡುತ್ತಾ ಯಾರಿಗೂ ನೋವು, ಕೇಡು ಬಯಸದೇ ಬಾಳಿದ ಹಿರಿಯ ಜೀವವದು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ