Webdunia - Bharat's app for daily news and videos

Install App

ಯುಐ ಸಿನಿಮಾ ಅಪ್ ಡೇಟ್ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ

Krishnaveni K
ಮಂಗಳವಾರ, 6 ಫೆಬ್ರವರಿ 2024 (10:14 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಯುಐ ಸಿನಿಮಾದ ಬಗ್ಗೆ ಹೊಸ ಅಪ್ ಡೇಟ್ ಕೊಟ್ಟಿದ್ದಾರೆ.

ಉಪೇಂದ್ರ ತಮ್ಮ ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಯುಐ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮೂಡಿಬರುತ್ತಿದ್ದು, ಈ ಸಿನಿಮಾದ ಕತೆಯೇ ಡಿಫರೆಂಟ್ ಆಗಿದೆ. ಇದು ಉಪ್ಪಿ ಟೇಸ್ಟ್ ನ ಸಿನಿಮಾ. ಇತ್ತೀಚೆಗಷ್ಟೇ ಉಪೇಂದ್ರ ಸಿನಿಮಾದ ಸಣ್ಣ ತುಣುಕೊಂದನ್ನು ಹೊರಬಿಟ್ಟಿದ್ದರು.

ಇದೀಗ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಯುಐ ಸಿನಿಮಾಗೆ ಸಂಗೀತ ಸಂಯೋಜಿಸಿರುವುದು ಕಾಂತಾರ ಖ್ಯಾತಿಯ ಅಜನೀಶ್ ಬಿ ಲೋಕನಾಥ್. ಉಪೇಂದ್ರ ಮೊದಲ ಸಿನಿಮಾದಿಂದ ಇಲ್ಲಿಯವರೆಗೆ ಅವರ ಎಲ್ಲಾ ಸಿನಿಮಾಗಳಲ್ಲೂ ಹಾಡುಗಳು ಉತ್ಕೃಷ್ಟ ಮಟ್ಟದಲ್ಲಿರುತ್ತದೆ. ಉಪ್ಪಿ ಹಾಡುಗಳೆಂದರೆ ಸೂಪರ್ ಹಿಟ್ ಎಂದೇ ಲೆಕ್ಕ.

ಇದೀಗ ಯುಐ ಸಿನಿಮಾ ಹಾಡುಗಳ ಬಗ್ಗೆಯೂ ಅಷ್ಟೇ ಕ್ರೇಜ್ ಇದೆ. ಉಪೇಂದ್ರ ಮಾಡೋದೆಲ್ಲಾ ಡಿಫರೆಂಟ್ ಆಗಿಯೇ ಮಾಡುತ್ತಾರೆ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ. ಹಾಡಿನ ಬಗ್ಗೆ ಹೇಳುವಾಗ ಮತ್ತೊಂದು ರಕ್ತಸಿಕ್ತ ಮುಖಭಾವದ ಪೋಸ್ಟರ್ ಕೂಡಾ ರಿಲೀಸ್ ಮಾಡಿದ್ದಾರೆ.

ಹೀಗಾಗಿ ಇದು ಯುಐ ಟೈಟಲ್ ಸಾಂಗ್ ಇರಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ. ಸದ್ಯಕ್ಕೆ ಸಿನಿಮಾದ ಹಾಡಿನ ಬಗ್ಗೆ ಇನ್ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಯುಐ ಸಿನಿಮಾದಲ್ಲಿ ಸಾಧುಕೋಕಿಲ, ರವಿಶಂಕರ್, ರೀಶ್ಮಾ ನಾಣಯ್ಯ ಸೇರಿದಂತೆ ಬಹುತಾರಾಗಣವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments